ಅಂಕೋಲಾ : ವಿಪರೀತ ಸಾಲದಿಂದ ಬೇಸತ್ತ ಗೃಹಣಿಯೊಬ್ಬಳು ಇಲಿ ಪಾಷಾಣ ಔಷಧಿಯನ್ನು ಐಸ್‌ಕ್ರಿಮ್‌ನಲ್ಲಿ ಬೆರೆಸಿಕೊಂಡು, ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಹಾರವಾಡದ ತರಂಗಮೇಟನಲ್ಲಿ ನಡೆದಿದೆ. ಸುಲೋಚನಾ ಕೀರಾ ಹರಿಕಂತ್ರ (38) ಆತ್ಮಹತ್ಯೆ ಮಾಡಿಕೊಂಡವಳು.

ಸುಲೋಚನಾ ಕೀರಾ ಹರಿಕಂತ್ರ

ಘಟನೆಯ ವಿವರ :

ಮನೆಯ ವ್ಯವಹಾರ ಹಾಗೂ ಸ್ವಂತ ಉದ್ಯೋಗ ಮಾಡುವ ಉದ್ದೇಶದಿಂದ ಸುಲೋಚನಾ ಕೀರಾ ಹರಿಕಂತ್ರ ಅವರು ಸ್ವಸಹಾಯ ಸಂಘಗಳಲ್ಲಿ ಮತ್ತು ಖಾಸಗಿ ಬ್ಯಾಂಕಿನಲ್ಲಿ ಬಂಗಾರ ಅಡವಿಟ್ಟು ಸಾಲ ಪಡೆದುಕೊಂಡಿದ್ದರು. ಸಾಲ ತೀರಿಸಲು ಸಾಧ್ಯವಾಗದೇ ಇದ್ದಾಗ, ಬ್ಯಾಂಕಿನಲ್ಲಿಟ್ಟ ಬಂಗಾರದ ಒಡವೆಗಳು ಹರಾಜಿಗೆ ಬಂದಿದ್ದರಿAದ ಮನಸ್ಸಿಗೆ ಬೇಜಾರು ಮಾಡಿಕೊಂಡು ಜಿಗುಪ್ಸೆಗೆ ಒಳಗಾಗಿ, ಜೂನ್ 6 ರಂದು ಐಸ್‌ಕ್ರಿಮ್‌ನಲ್ಲಿ ಇಲಿ ಪಾಷಣ ಬೆರಿಸಿಕೊಂಡು  ಸೇವಿಸಿದ್ದಳು. ತೀವ್ರ ಅಸ್ವಸ್ಥರಾದ ಈಕೆಯನ್ನು ಅಂಕೋಲಾದ ತಾಲೂಕಾ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.

       ಚಿಕಿತ್ಸೆ ಫಲಕಾರಿಯಾಗದೇ ಜೂನ್ 14 ರಂದು ಮಣಿಪಾಲ ಕಸ್ತೂರಬಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಪಿಎಸೈ ಪ್ರವೀಣಕುಮಾರ ತಿಳಿಸಿದ್ದಾರೆ. ಮೃತರು ಸಲೋಚನಾ ಪತಿ, ಮೂವರು ಪುತ್ರಿಯರು ಸೇರಿದಂತೆ ಅಪಾದ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಬಡ್ಡಿ ಸಾಲದ ಮಾಫಿಯಾಕ್ಕೆ ಬಲಿಯಾದಳೆ ಸುಲೋಚನಾ..?

ಸುಲೋಚನಾ ಕೀರಾ ಹರಿಕಂತ್ರರ ಸಾವು ಮೀಟರ್ ಬಡ್ಡಿಯ ಸಾಲಕ್ಕೆ ಬಲಿಯಾಯಿತೇ ಎಂಬ ಮಾತುಗಳು ಗ್ರಾಮದಲ್ಲಿ ಹರಿದಾಡುತ್ತಿದೆ. ಕೇವಲ ಖಾಸಗಿ ಬ್ಯಾಂಕನಲ್ಲಿ ಅಷ್ಟೇ ಸಾಲ ಮಾಡಿಕೊಂಡಿರದ ಸುಲೋಚನಾ ಕೆಲವು ಬಡ್ಡಿ ಮಕ್ಕಳಿಂದ ಮೀಟರ್ ಬಡ್ಡಿಗೆ ಹಣ ಪಡೆದುಕೊಂಡಿದ್ದಳು ಎನ್ನಲಾಗಿದೆ. ಸುಮಾರು 14 ಲಕ್ಷಕ್ಕೂ ಹೆಚ್ಚು ಸಾಲವನ್ನು ಮಾಡಿಕೊಂಡಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸುಲೋಚನಾಳ ಸಾವಿಗೆ ನ್ಯಾಯ ಒದಗಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.