ವರದಿ : ಸಂದೇಶ ದೇಸಾಯಿ

ಜೋಯಿಡಾ : ತಾಲೂಕಿನ ಗಾಂಗೋಡಾ ಮಲ್ಕರ್ಣಿಗೆ ನೂತನ ಬಸನ್ನು ಜೋಯಿಡಾದಿಂದ ಪ್ರಾರಂಭಿಸಲಾಗಿದ್ದು ಇದರಿಂದಾಗಿ ಗ್ರಾಮಸ್ಥರಲ್ಲಿ ಹರ್ಷವನ್ನು ಉಂಟು ಮಾಡಿದೆ.

ಶಾಲಾ ಮಕ್ಕಳಿಗೆ ಮತ್ತು ಇಲ್ಲಿನ ಸ್ಥಳೀಯರಿಗೆ ಅನುಕೂಲವಾಗಲಿ ಎಂದು ಹೊಸ ಬಸ್ಸನ್ನು ಪ್ರಾರಂಭಿಸಲಾಗಿದೆ. ಜೋಯಿಡಾದಿಂದ ಬಸ್‌ನ್ನು 8:30 ಕ್ಕೆ ಬಿಡಲಾಗುತ್ತಿದೆ. ಇಲ್ಲಿನ ಸಾರ್ವಜನಿಕರು ಬಸ್‌ನ್ನು 8 ಗಂಟೆಗೆ ಬಿಡಬೇಕು. ಇಲ್ಲವಾದಲ್ಲಿ ಮಕ್ಕಳಿಗೆ ಶಾಲೆಗೆ ತಲುಪಲು ತಡವಾಗುತ್ತದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

        ನೂತನವಾಗಿ ಆಗಮಿಸಿದ ಬಸ್‌ಗೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಗ್ರಾಮಸ್ಥರು ಸಂಭ್ರಮಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಗಾಂಗೋಡಾ ಗ್ರಾಪಂ ಅಧ್ಯಕ್ಷ ಸುಬ್ರಾಯ ಹೆಗಡೆ, ಉಪಾಧ್ಯಕ್ಷ ಪ್ರವೀಣ ದೇಸಾಯಿ ಸೇರಿದಂತೆ ಊರ ಗ್ರಾಮಸ್ಥರು ಶಾಲಾ ಮಕ್ಕಳು ಉಪಸ್ಥಿತರಿದ್ದರು.