ವರದಿ : ಓರ್ವಿಲ್ಲ್ ಫರ್ನಾಂಡಿಸ್
ಹಳಿಯಾಳ ; ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಆಡಳಿತ ವ್ಯವಸ್ಥೆ ಅಳವಡಿಸಿ ಕೊಂಡರೇ ಈಗ ದೇಶದಲ್ಲಿ ತಲೆದೂರಿರುವ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳು ಶಾಶ್ವತ ಪರಿಹಾರವಾಗಿ ಎಲ್ಲೆಡೆ ಸಮೃದ್ದಿ ನೆಲೆಸಲಿದೆ ಎಂದು ಶಿವಕೋಟೆಗಳ ದರ್ಶನ ಅಭಿಯಾನದ ಬೆಳಗಾವಿ ವಿಭಾಗದ ಪ್ರಮುಖರಾದ ಹೀರಾಮಣಿ ಮುಚ್ಚೆಂಡಕರ ಅಭಿಪ್ರಾಯಪಟ್ಟರು.
ಅವರು ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದಲ್ಲಿ ಶನಿವಾರ ಶ್ರೀ ಶಿವ ಪ್ರತಿಷ್ಠಾನ ಹಿಂದೂಸ್ಥಾನ ಸಂಘಟನೆಯವರು ಆಯೋಜಿಸಿದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಕೋಟೆಗಳನ್ನು ಕಾಲ್ನಡಿಗೆಯ ಮೂಲಕ ದರ್ಶನ ಮಾಡುವ ಅಭಿಯಾನದ ಪ್ರಯುಕ್ತ ನಡೆದ ಭಂಡಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಶ್ರೀ ಛತ್ರಪತಿ ಶಿವಾಜಿ ಮಹಾರಾಜರಿಂದಲೇ ದೇಶದಲ್ಲಿ ಹಿಂದೂ ಧರ್ಮ ಉಳಿಯಿತು ಎಂದರು. ಶಿವಾಜಿ ಮಹಾರಾಜರ ಪುತ್ಥಳಿಗಳನ್ನು ಪ್ರತಿಷ್ಠಾಪಿಸಲು ಆಸಕ್ತಿ ತಾಳುವ ನಾವು ಅವರ ಆದರ್ಶ, ಚಿಂತನೆಗಳನ್ನು ಅರಿತು ಬದುಕಿನಲ್ಲಿ ಅಳವಡಿಸಲು ಮುಂದಾಗುತ್ತಿಲ್ಲ ಎನ್ಬುವುದಕ್ಕೆ ದೇಶದಲ್ಲಿ ನಡೆದಿರುವ ವಿದ್ಯಮಾನಗಳೇ ಸಾಕ್ಷಿ ಎಂದರು.
ಶಿವಕೋಟೆಗಳ ದರ್ಶನ:
ಶಿವಕೋಟೆಗಳ ದರ್ಶನ ಅಭಿಯಾನದ ಮಾಹಿತಿಯನ್ನು ನೀಡಿದ ಹೀರಾಮಣಿ ಶ್ರೀ ಶಿವಪ್ರತಿಷ್ಠಾನದ ಸಂಸ್ಥಾಪಕರಾದ ಭೀಡೆ ಗುರೂಜಿಯವರು ಕಳೆದ ಮೇ ತಿಂಗಳಲ್ಲಿ 14 ರಿಂದ 17ರವರೆಗೆ ವಿಶಾಲಗಡದಿಂದ ಪನಾಳಗಡದವರೆಗೆ ಕಾಲ್ನಡೊಗೆಯಲ್ಲಿ ಸಾಗಿ ಶಿವ ಕೋಟೆಗಳ ದರ್ಶನದ ವಿಶಿಷ್ಟ ಅನುಭವ ಪಡೆಯುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ ಹಳಿಯಾಳ ತಾಲೂಕಿನಿಂದ ಹಾಗೂ ಯಡೋಗಾದಿಂದ ಸಾಕಷ್ಟು ಶಿವ ಅಭಿಮಾನಿಗಳು ಪಾಲ್ಗೋಂಡು ಪುಣಿತರಾಗಿದ್ದಾರೆ. ಈ ಅಭಿಯಾನದಲ್ಲಿ ಭಾಗವಹಿಸಿದ್ದವರ ಗ್ರಾಮದಲ್ಲಿ ಕಾರ್ಯಕ್ರಮ ನಡೆಸಿ ಶ್ರೀ ಶಿವಾಜಿ ಮಹಾರಾಜರ ವಿಚಾರಗಳ ಚಿಂತನ ಮಂಥನ ಮಾಡಿ ಅನ್ನಪ್ರಸಾದ ವಿತರಣೆಯ ಬಂಡಾರ ಕಾರ್ಯಕ್ರಮವನ್ನು ನಡೆಸುವ ಸಂಪ್ರದಾಯ ಬೆಳೆದು ಬಂದಿದೆ. ಹಳಿಯಾಳ ತಾಲೂಕಿನಲ್ಲಿ ಮೊದಲ ಬಂಡಾರ ಕಾರ್ಯಕ್ರಮವನ್ನು ಆಯೋಜಿಸುವ ಶ್ರೇಯಸ್ಸು ಯಡೋಗಾ ಗ್ರಾಮಕ್ಕೆ ಸಂದಿದೆ ಎಂದು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಿವಕೋಟೆಗಳ ದರ್ಶನ ಅಭಿಯಾನದಲ್ಲಿ ಯಶಸ್ವಿಯಾಗಿ ಭಾಗವಹಿಸಿದ ಯಡೋಗಾ ಗ್ರಾಮಸ್ಥರನಗನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಯಡೋಗಾ ಗ್ರಾಪಂ ಅಧ್ಯಕ್ಷ ಸಂಜೀವ ಹಿರೇಕೆ, ಯಡೋಗಾ ಶಿವ ಪ್ರತಿಷ್ಠಾನದ ಅಧ್ಯಕ್ಷ ಗಣಪತಿ ಕುಂದೇಕರ, ಪ್ರಮುಖರಾದ ಪುಂಡ್ಲಿಕ್ ಚವ್ಹಾನ, ರಾಮಶ ಮೋರಿ, ಅಪ್ಪಾರಾವ ಪೂಜಾರಿ, ಏಕನಾಥ ಇಂಗೋಲೆ, ಸಹದೇವ ಹಿರೇಕರ, ಸಂಬಾಜಿ ಬೊಬ್ಲಿ, ಯಲ್ಲಾರಿ ಸುಂಟಕರ, ರಾಮಾ ಗೌಡಾ, ಪಾಂಡುರAಗ ಹಿರೇಕರ, ಸಚಿನ ಕದಂ ಮೊದಲಾದ ಪ್ರಮುಖರು ಇದ್ದರು.
