ಜೋಯಿಡಾ : ತಾಲೂಕಿನ ನಂದಿಗದ್ದಾದಲ್ಲಿ ಹರಿಪ್ರೀಯಾ ಸಂಜಿವಿನಿ ಗ್ರಾಮ ಪಂಚಾಯತ ಒಕ್ಕೂಟ ನಂದಿಗದ್ದೆ ಇವರ ಆಶ್ರಯದಲ್ಲಿ ಹಲಸಿನ ಮೇಳ ,ಸಾಮಾನ್ಯ ಸಭೆ ಮತ್ತು ಆರನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಹರಿಪ್ರೀಯಾ ನಂದಿಗದ್ದೆ ಸಂಜೀವಿನಿ ಗ್ರಾಮ ಪಂಚಾಯತ ಒಕ್ಕೂಟದ ಅಧ್ಯಕ್ಷೆ ಸುಮಂಗಲಾ ದೇಸಾಯಿ ಹಲಸಿನ ಹಲಸಿನ ಮೇಳವನ್ನು ನಮ್ಮೂರಿನ ಮಹಿಳೆಯರೆ ಸೇರಿ ಮಾಡಿದ್ದಾರೆ, ಇಲ್ಲಿನ ಬಹಳಷ್ಟು ಸ್ವಸಹಾಯ ಸಂಘಗಳು ಹಲಸಿನ ಕಾಯಿಯಿಂದ ಮಾಡಿದ ಖಾಧ್ಯಗಳನ್ನು ತಂದು ಮಾರಾಟ ಮಾಡುವುದರಿಂದ ಮಹಿಳೆಯರಿಗೆ ತಾವು ದುಡಿಯಬಹುದು ಎಂಬುವ ಕಲ್ಪನೆ ಬರುತ್ತದೆ. ಒಂದು ವಾರಗಳಿಂದ ಶ್ರಮ ಪಟ್ಟು ಮನೆಯಲ್ಲಿಯಲ್ಲಿರುವ ಹೆಣ್ಣು ಮಕ್ಕಳು ಹಲಸಿನ ಖಾಧ್ಯ ಮಾಡಿ ಇಲ್ಲಿ ಪ್ರದರ್ಶನಕ್ಕೆ ತಂದಿರುವುದು ಸಂತಸದ ವಿಷಯ ಎಂದರು.
ನಂದಿಗದ್ದಾ ಗ್ರಾಪಂ ಸದಸ್ಯ ಧವಳೋ ಸಾವರಕರ ಮಾತನಾಡಿ ಆಧುನಿಕ ಯುಗದಲ್ಲಿ ಜನರು ಜಂಕ್ ಪುಡ್ ಕಡೆಗೆ ಹೆಚ್ಚಿನ ಜನರು ವಾಲುತ್ತಾರೆ, ಇಂತಹ ಹಲಸಿನ ಮೇಳವನ್ನು ಮಾಡುವುದರಿಂದ ನಿಸರ್ಗ ದತ್ತವಾಗಿ ಸಿಗುವ ಹಲಸು ,ಬಾಳೆ ಹೀಗೆ ಮುಂತಾದ ಬೆಳೆಗೆಳ ಖಾಧ್ಯಗಳನ್ನು ನಾವು ಸೇವಿಸಬಹುದಾಗಿದೆ, ಮಹಿಳೆಯರೇ ಹಲಸಿನ ಮೇಳವನ್ನು ನಡೆಸುತ್ತಿರುವುದು ವಿಶೇಷ ಎಂದರು.
ಪ್ರಾಸ್ತಾವಿಕವಾಗಿ ನಂದಿಗದ್ದಾ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಂತೋಷ ಅಣ್ವೇಕರ ಮತ್ತು ಸಂಜಿವಿನಿ ಒಕ್ಕೂಟ ಜೋಯಿಡಾ ಅಧಿಕಾರಿ ಮರಿಸ್ವಾಮಿ ಮಾತನಾಡಿದರು.
ಹಲಸಿನ ಮೇಳದಲ್ಲಿ ಹಲಸಿನ ಕಾಯಿಯಿಂದ ಮಾಡಿದ ವಿವಿಧ ರೀತಿಯ ಖಾಧ್ಯಗಳನ್ನು ಮಾಡಲಾಗಿತ್ತು, ನೂರಾರು ಜನರು ಹಲಸಿನ ಮೇಳದಲ್ಲಿ ಭಾಗವಹಿಸಿ ತಿಂಡಿ ತಿನಿಸುಗಳನ್ನು ಖರೀದಿ ಮಾಡಿ ಸಂತಸ ಪಟ್ಟರು.
ಈ ಸಂದರ್ಭದಲ್ಲಿ ನಂದಿಗದ್ದಾ ಗ್ರಾಪಂ ಸದಸ್ಯೆ ಶೋಭಾ ಎಲ್ಲೆಕರ, ಪಿಡಿಓ ಸಂತೋಷ ಅಣ್ವೇಕರ,ಸಂಜೀವಿನಿ ಒಕ್ಕೂಟದ ಕಿರಣ ಕುಮಾರ ,ಸಂಧ್ಯಾ ದೇಸಾಯಿ , ಭಾರತಿ ಹೆಗಡೆ ಇತರರು ಉಪಸ್ಥಿತರಿದ್ದರು.
