ಜೋಯಿಡಾ : ತಾಲೂಕಿನ ಸುಪಾ ಜಲಾಶಯ ಖಾಲಿ ಆಗುತ್ತಿದ್ದಾಗ ,ಬೇರೆ ಜಿಲ್ಲೆಗಳಿಗೆ ನೀರು ಕೊಡುವ ಯೋಜನೆ ಎಷ್ಟು ಸೂಕ್ತ, ಮೊದಲು ಸುಪಾ ಜಲಾಶಯ ನಿರ್ಮಿಸಲು ತಮ್ಮ ಮನೆ ,ಜಮೀನು ತ್ಯಾಗ ಮಾಡಿದ ರಾಮನಗರ ಜನರಿಗೆ ನೀರು ಕೊಡಿ ಎಂದು ಕಟ್ಟಡ ಮತ್ತು ಇತರೆ ಕಾರ್ಮಿಕ ಪೆಡರೆಶನ್ ಜಿಲ್ಲಾಧ್ಯಕ್ಷ ಹರೀಶ್ ನಾಯ್ಕ ಹೇಳಿದರು.

ಅವರು ಖಾಲಿಯಾದ ಸುಪಾ ಜಲಾಶಯಕ್ಕೆ ಭೇಟಿ ನೀಡಿ ಸುಪಾ ಜಲಾಶಯ ನಿರ್ಮಾಣವಾಗಲು ಅನೇಕ ಜನರ ತ್ಯಾಗವಿದೆ , ಇಲ್ಲಿಯ ನೀರಿನಿಂದಲೇ ಜಗತ್ತಿಗೆ ವಿದ್ಯುತ್ ನೀಡಲಾಗುತ್ತಿದೆ. ಅಲ್ಲದೇ ಕೆಲವು ಕಾರ್ಖಾನೆಗಳು ಕಾಳಿ ನದಿ ನೀರನ್ನೇ ಅವಲಂಬಿಸಿದ್ದು, ಸಧ್ಯ ಸುಪಾ ಜಲಾಶಯ ಖಾಲಿ ಆದ ಕಾರಣ ಕಾರ್ಖಾನೆಗಳು ಸಮಸ್ಯೆ ಎದುರಿಸುತ್ತಿವೆ. 40 ವರ್ಷಗಳಿಂದ ಖಾಲಿಯಾಗದ ಜಲಾಶಯ ಈ ವರ್ಷ ಖಾಲಿಯಾಗಿದೆ, ಕೆಲ ರಾಜಕಾರಣಿಗಳಿಗೆ ನಮ್ಮ ಕಾಳಿ ನದಿಯ ಮೇಲೆ ಕಣ್ಣಿದೆ, ಆದರೆ ನಾವು ನಮ್ಮ ಕಾಳಿ ನದಿ ನೀರನ್ನು ನಮ್ಮ ಜಿಲ್ಲೆಯ ಉಪಯೋಗಕ್ಕೆ ಮತ್ತು ಜಲಾಶಯಕ್ಕಾಗಿ ತ್ಯಾಗ ಮಾಡಿದ ರಾಮನಗರ ,ಜೋಯಿಡಾ ಜನತೆಗೆ ನೀರು ಕೊಡುವ ಕೆಲಸ ಮಾಡಿ ಎಂದರು.

ಈ ಸಂದರ್ಭದಲ್ಲಿ ರಾಮನಗರ ಭಾಗದ ಮಂಜುನಾಥ ನಾಯ್ಕ, ಸುನೀಲ್ ನಾಯರ್, ರಾಮಾ ಗೋಸಾವಿ, ಪ್ರಭಾಕರ ಅಮಟೆಕರ, ಇತರರು ಉಪಸ್ಥಿತರಿದ್ದರು.