ಯಲ್ಲಾಪುರ : ತಾಲೂಕಿನ ಪುರಾಣ ಪ್ರಸಿದ್ಧ ಅಣಲಗಾರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ಎರಡು ದಿನಗಳ ಕಾಲ ನಡೆದ ಅಷ್ಟಬಂಧ-ಪ್ರತಿಷ್ಠಾಮಹೋತ್ಸವ ಗುರುವಾರ ಸಂಪನ್ನಗೊಂಡಿತು.

ನಾಂದಿ,ಪುಣ್ಯಾಹ,ಮಹಾಸಂಕಲ್ಪ, ಶ್ರಿಸೂಕ್ತ ಪಾರಾಯಣೆ, ಪುರುಷ ಸೂಕ್ತ ಪಾರಾಯಣೆ, ಗಣಹವನ, ರಾಕ್ಷೋಘ್ನ, ವಾಸ್ತು ಶಾಂತಿ, ನೂತನ ಅಷ್ಟಬಂಧ ಲೇಪನ, ಶ್ರೀಸೂಕ್ತ ಹವನ, ಪುರುಷಸೂಕ್ತ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಗೋಕರ್ಣದ ಗಜಾನನ ಹಿರೇಭಟ್ಟರ ಮಾರ್ಗದರ್ಶನದಲ್ಲಿ ನಡೆದವು.

ದೇವಾಲಯಕ್ಕೆ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರು ಭೇಟಿ ನೀಡಿದ್ದರು. ಗುರುಪಾದಪೂಜೆ ನಡೆಯಿತು. ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.