ಅಂಕೋಲಾ : ತಾಲೂಕಿನ ಭಾವಿಕೇರಿಯ ಸೆಕೆಂಡರಿ ಸ್ಕೂಲ್‌ನ ವಿದ್ಯಾರ್ಥಿನಿ ಅನುಷಾ ಗಿರೀಶ ನಾಯಕ ಅವರು ತಾಲೂಕಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.

8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಪತಂಜಲಿ ಯೋಗ ಸಮಿತಿ ಭಾರತ ಸ್ವಾಭಿಮಾನ್ ಟ್ರಸ್ಟ್ ಅಂಕೋಲಾ ಹಾಗೂ ಪತಂಜಲಿ ಮಹಿಳಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಮನುಕುಲದ ಒಳಿತಿಗಾಗಿ ಯೋಗದ ಪಾತ್ರ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಯ ಸಾಧನೆಗೆ ಭಾವಿಕೇರಿಯ ಸೆಕೆಂಡರಿ ಸ್ಕೂಲ್‌ನ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.