ಯಲ್ಲಾಪುರ :
ಪಟ್ಟಣದ ಜೋಡುಕೆರೆ ಸಮೀಪ, ತಾಲೂಕಾ ಆಸ್ಪತ್ರೆಯ ರಸ್ತೆಯಿಂದ ಮಾರುತಿ ದೇವಾಲಯಕ್ಕೆ ತೆರಳುವ ದಾರಿ ತೀರಾ ಕಿರಿದಾಗಿತ್ತು. ಸ್ಥಳೀಯರ ಮನವಿಯಂತೆ ಕೆರೆಗೆ ಹಾಗೂ ದೇವಾಲಯಕ್ಕೆ ಭಕ್ತರು ತೆರಳಲು ಅನುಕೂಲವಾಗುವಂತೆ ಗುತ್ತಿಗೆದಾರ ನಾಗೇಶ ಭೋವಿವಡ್ಡರ್ ಅವರು ಬುಧವಾರ ಜೆಸಿಬಿ ಮೂಲಕ ರಸ್ತೆಯನ್ನು ಅಗಲಗೊಳಿಸಿ, ಸಮತಟ್ಟುಗೊಳಿಸಿದ್ದಾರೆ. ಸ್ವಂತ ಖರ್ಚಿನಲ್ಲಿ ರಸ್ತೆ ಸಮತಟ್ಟುಗೊಳಿಸಿ ಸಾರ್ವಜನಿಕರಿಗೆ ಅನುಕೂಲಕಲ್ಪಿಸಿದ ನಾಗೇಶ ಭೊವಿವಡ್ಡರ್ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಈ ಕಾರ್ಯಕ್ಕೆ ಪಟ್ಟಣದ ಪ್ರೈಮ್ ಎಂಟರ್ ಪ್ರೈಸಸ್ ಮಾಲಿಕ ನೀಲಕಂಠ ನಾಯ್ಕ ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ