ಅಂಕೋಲಾ : ನಮ್ಮ ಮನಸ್ಸು ಹೇಳಿದಂತೆ ದೇಹ ಕೇಳಲು ಯೋಗಾಭ್ಯಾಸ ಅತ್ಯಂತ ಸಹಕಾರಿ. ದೇಹಕ್ಕೆ ಆಹಾರದಂತೆ ಯೋಗವೂ ಅತೀ ಅವಶ್ಯಕ ಎಂದು ಜೈಹಿಂದ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಜೀವನ ಪಿ. ಶೆಟ್ಟಿ ಹೇಳಿದರು.

ಅವರು ಸಂಗಮ ಸೇವಾ ಸಂಸ್ಥೆ (ರಿ) ಹೊನ್ನಾವರ ವತಿಯಿಂದ ಜೈಹಿಂದ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಅಂಕೋಲಾದಲ್ಲಿ ಏರ್ಪಡಿಸಲಾದ ಅಂತರಾಷ್ಟ್ರೀಯ ಯೋಗ ದಿನಾಚರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ದೇಹದ ಆರೋಗ್ಯ ಕಾಪಾಡಲು ಯೋಗ ಅತ್ಯಂತ ಸಹಕಾರಿ ಎಂದು ಪತಂಜಲಿ ಯೋಗ ಸಮಿತಿಯ ಸಂಪನ್ಮೂಲ ವ್ಯಕ್ತಿ ಶೋಭಾ ಶೆಟ್ಟಿ ಪ್ರಾತ್ಯಕಿಕೆ ಮೂಲಕ ತಿಳಿಸಿಕೊಟ್ಟರು.

ನಾಗವೇಣಿ ನಾಯ್ಕ ಪ್ರಾತ್ಯಕ್ಷಿಕೆಗೆ ಸಹಕರಿಸಿದರು.
ಸಂಗೀತಾ ಸಂಗಡಿಗರು ಪ್ರಾರ್ಥಿಸಿದರು.ಶಿಕ್ಷಕಿ ವಿದ್ಯಾ ಗಾಂವಕರ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಸುವರ್ಣಾ ನಾಯ್ಕ ಪರಿಚಯಿಸಿದರು. ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಸ್ವಾಗತಿಸಿದರು. ಕೌಟುಂಬಿಕ ಸಲಹೆಗಾರ ತಿಮ್ಮಣ್ಣ ಬಿ. ಭಟ್ ವಂದಿಸಿದರು.