ಅಂಕೋಲಾ: ಉತ್ತರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಶಪಡಿಸಿಕೊಂಡಿದ್ದ ಮಾಧಕ ವಸ್ತುಗಳನ್ನು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ ಅವರ ನೇತ್ರತ್ವದಲ್ಲಿ ಸುಟ್ಟು ನಾಶಪಡಿಸಲಾಯಿತು.
ಅಂತರರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಒಟ್ಟೂ 16,17,460 ರೂಪಾಯಿ ಮೌಲ್ಯದ 75 ಕೆಜಿ 314 ಗ್ರಾಂ 495 ಮಿ. ಗ್ರಾಂ ಮಾದಕ ದ್ರವ್ಯವನ್ನು ನಾಶಪಡಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ವಶಪಡಿಸಿಕೊಂಡಿರುವ ಮಾದಕ ವಸ್ತುಗಳನ್ನು ಪೊಲೀಸ್ ಅಧೀಕ್ಷಕರು ಹಾಗೂ ಉತ್ತರ ಮಾದಕ ವಸ್ತು ವಿಲೇವಾರಿ ಸಮಿತಿ ಹಾಗೂ ಮತ್ತು ಪಂಚರ ಸಮಕ್ಷಮ ಸಮ್ಮುಖದಲ್ಲಿ ಅಂಕೋಲಾ ತಾಲೂಕಿನ ಬೊಗ್ರಿಬೈಲ್ ನ ಕೆನರಾ ಐ. ಎಮ್. ಎ.(ಯು.ಕೆ) ಕಾನ್ ಟ್ರೀಟ್ ಮೆಂಟ್ ಫೆಸಿಲಿಟಿ ರವರ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲಾಯಿತು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿನ ಒಟ್ಟೂ 69 ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ 15,21,660 ರೂಪಾಯಿ ಮೌಲ್ಯದ 75 ಕೆಜಿ 119 ಗ್ರಾಂ 495 ಮಿ. ಗ್ರಾಂ ಗಾಂಜಾ ಹಾಗೂ 1 ಪ್ರಕರಣಗಳಲ್ಲಿನ 80,000 ಮೌಲ್ಯದ 195 ಗ್ರಾಂ ನಷ್ಟು ಚರಸ್ ಹಾಗೂ 4 ಪ್ರಕರಣಗಳಲ್ಲಿನ 15,800 ರೂಪಾಯಿ ಮೌಲ್ಯದ 61 ಗಾಂಜಾ ಸಸಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ ಮಾತನಾಡಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ನಿಯಮಾನುಸಾರ ಒಟ್ಟೂ 69 ಪ್ರಕರಣಗಳಲ್ಲಿನ ಮಾದಕ ದ್ರವ್ಯವನ್ನು ನಾಶಪಡಿಸಲಾಗಿದೆ. ಜಿಲ್ಲೆಯನ್ನು ಮಾಧಕ ವಸ್ತುಗಳಿಂದ ಮುಕ್ತವಾಗಿಸಲು ಪೊಲೀಸ್ ಇಲಾಖೆ ಸನ್ನದ್ದವಾಗಿದೆ. ಮಾಧಕ ವಸ್ತುಗಳನ್ನು ಮಾರಾಟ ಮಾಡುವದಾಗಲಿ ಅಥವಾ ಸೇವಿಸುತ್ತಿರುವ ಬಗ್ಗೆ ಕಂಡು ಬಂದಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತರವಂತಾಗಬೇಕು. ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನದ ಜೊತೆಗೆ ಹೆಸರನ್ನು ಗೌಪ್ಯವಾಗಿಡಲಾಗುವದು ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಬದರಿನಾಥ, ಡಿವೈಎಸ್ಪಿ ವೆಲೈಂಟನ್ ಡಿಸೋಜಾ, ಅಫರಾಧ ವಿಭಾಗದ ಉಪ ಅಧೀಕ್ಷಕ ಅರವಿಂದ ಕಲಗುಜ್ಜಿ, ಸಿಪಿಐ ಸಂತೋಷ ಶೆಟ್ಟಿ, ಬೆರಳಚ್ಚು ತಜ್ಞ ರಾಘವೇಂದ್ರ ನಾಯ್ಕ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
