ಜೋಯಿಡಾ : ತಾಲೂಕಿನ ರಾಮನಗರ ಪೋಲಿಸ್ ಇಲಾಖೆಯ ವತಿಯಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಮನಗರ ಪಟ್ಟಣದ ಸುತ್ತಮುತ್ತಲು ಸೈಕಲ ಜಾಥಾ ಮೂಲಕ ಮಾದಕ ದ್ರವ್ಯ ದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಾಂಡೇಲಿ – ಜೋಯಿಡಾ ಡಿ.ವೈ.ಎಸ್.ಪಿ. ಗಣೇಶ ಕೆ.ಎಲ್ ನಮ್ಮ ಪೋಲಿಸ್ ಇಲಾಖೆಯ ವತಿಯಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಎಲ್ಲಾ ಠಾಣೆಗಳಲ್ಲಿ ಮಾಡಲಾಗುತ್ತಿದೆ. ರಾಮನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮಾಡಲಾಗುತ್ತಿದ್ದು, ಅಪ್ರಾಪ್ತ ಮಕ್ಕಳು ಇಂದಿನ ದಿನದಲ್ಲಿ ಹೆಚ್ಚು ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದಾರೆ, ಮಾದಕ ದ್ರವ್ಯ ಸೇವನೆಯಿಂದ ಮನುಷ್ಯನ ಜೀವ ಹಾಳಾಗುತ್ತದೆ, ದುಷ್ಚಟಗಳನ್ನು ಎಲ್ಲರೂ ಕಡಿಮೆ ಮಾಡಬೇಕು ಮತ್ತು ಉತ್ತಮ ಆರೋಗ್ಯವನ್ನು ಹೊಂದಿ ನಮ್ಮ ದೇಶದ ಉನ್ನತಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಜೋಯಿಡಾ ಸಿ.ಪಿ.ಐ ದಯಾನಂದ ಎಸ್, ರಾಮನಗರ ಪಿಎಸೈ ವಿನೋದ ರೆಡ್ಡಿ, ಕ್ರೈಂ ಪಿಎಸೈ ಲಕ್ಷ್ಮಣ ಪೂಜಾರಿ ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು .
