ವರದಿ : ರಾಘು ಕಾಕರಮಠ.
ಅಂಕೋಲಾ : ಪ್ರೀತಿಯ ಮಾಯೆಯಿಂದ ಮೋಸ ಹೋಗಿ, ಓರಿಸ್ಸಾ ಸೇರಿಕೊಂಡಿದ್ದ ಪ್ರಿಯತಮೆಯೊಬ್ಬಳು, ಪ್ರೀಯತಮನ ಅಸಲಿ ರೂಪ ಕಂಡು ತನ್ನನ್ನು ರಕ್ಷಿಸಿವಂತೆ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೆಕರ್ ಅವರಲ್ಲಿ ಮೊರೆ ಹೋದ ಹಿನ್ನೆಲೆಯಲ್ಲಿ ಅಂಕೋಲಾ ಪೊಲೀಸರು 3600 ಕೀಮಿ ಕ್ರಮಿಸಿ ಯುವತಿಯನ್ನು ರಕ್ಷಿಸಿ ಅಂಕೋಲಾಕ್ಕೆ ಕರೆತರುತ್ತಿರುವ ಕುತೂಹಲಕಾರಿ ವಿದ್ಯಮಾನ ನಡೆದಿದೆ.
ಹೌದು.. ಇದು ಮೋಸ ಹೋದ ಯುವತಿಯ ವ್ಯಥೆಯ ಕಥೆ. ಹಾರವಾಡ ಗಾಬಿತವಾಡದ ಯುವತಿಯೊಬ್ಬಳು ಸ್ವಗೃಹದಿಂದ ಫೆಬ್ರುವರಿ 14 ಸಂಜೆ 7 ಗಂಟೆಗೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೊರಟ ಯುವತಿಯೊಬ್ಬಳು, ಮನೆಗೆ ಹಿಂದಿರುಗದೆ ಕೆಲಸಕ್ಕೂ ಹೋಗದೆ ಕಾಣೆಯಾಗಿದ್ದಾಳೆ ಎಂದು ಯುವತಿಯ ತಂದೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರೀತಿ ಮಾಯೆ ಹುಷಾರು ;
ಹಾರವಾಡದ ಅನುಷ್ಕಾ (ಹೆಸರು ಬದಲಾಯಿಸಲಾಗಿದೆ) ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸಕ್ಕಿರುವಾಗ ಓರಿಸ್ಸಾದ ಯುವಕನೊಬ್ಬನೊಂದಿಗೆ ಸ್ನೇಹವಾಗಿದೆ. ಸ್ನೇಹ ಪ್ರೀತಿಗೆ ಜಾರಿದ ಹಿನ್ನೆಲೆಯಲ್ಲಿ ಅನುಷ್ಕಾ ಮನೆಯವರಿಗೂ ಹೇಳದೆ ಕೇಳದೆ ಓರಿಸ್ಸಾಕ್ಕೆ ಸಾಗಿದ್ದಳು. ದಿನ ಕಳೆದಂತೆ ಅನುಷ್ಕಾಳಿಗೆ ಪ್ರೀಯತಮನ ಅಸಲಿ ಮುಖ ಪರಿಚಯವಾಗುತ್ತಾ ಹೋಯಿತು. ತೀವ್ರ ಕಿರುಕುಳವನ್ನು ಅನುಷ್ಕಾ ಅನುಭವಿಸುತ್ತ ಅತಂತ್ರರಾಗಿದ್ದಳು.
ಸ್ಪಂದಿಸಿದ ಎಸ್ಪಿ ಸುಮನ್ ಪೆನ್ನೇಕರ :
ಸಾವಿರಾರು ಕೀಮಿ ಆಚೆಯ ಓರಿಸ್ಸಾದಲ್ಲಿ ಅನುಷ್ಕಾ ಸಿಲುಕಿ ಹಾಕಿಕೊಂಡು ನರಕ ಯಾತನೆ ಅನುಭವಿಸುತ್ತಿದ್ದಳು. ತೀವ್ರ ಕಿರುಕುಳ ಅನುಭವಿಸುತ್ತಿರುವ ಈಕೆ ತನ್ನ ನೋವನ್ನು ಯಾರಲ್ಲಿಯೂ ಹೇಳಿಕೊಳ್ಳದೆ ಅತಂತ್ರಳಾಗಿದ್ದಳು. ಆಗ ಅನುಷ್ಕಾ ನೇರವಾಗಿ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ ಅವರ ನಂಬರನ್ನು ಸಾಮಾಜಿಕ ಜಾಲದಲ್ಲಿ ಜಾಲಾಡಿ, ಅಂತೂ ಎಸ್ಪಿ ಸುಮನ್ ಪೆನ್ನೇಕರ ಅವರ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಕೂಡಲೇ ಸ್ಪಂದಿಸಿದ ಪೊಲೀಸ್ ವರಿಷ್ಠಾಧಿಕಾರಿಗಳು ಅನುಷ್ಕಾಳನ್ನು ರಕ್ಷಿಸಿ ತರುವಂತೆ ಸೂಚನೆ ನೀಡಿದ್ದರು.
ಎದೆಗಾರಿಕೆ ತೋರಿದ ಪಿಎಸೈ ಮಹಾಂತೇಶ :
ದೂರದ ಓರಿಸ್ಸಾದಿಂದ ಯುವತಿಯನ್ನು ರಕ್ಷಿಸಿ ತರುವುದು ಸಾಮಾನ್ಯದ ಸಂಗತಿಯಾಗಿರಲಿಲ್ಲ. ಅನುಷ್ಕಾ ಸಿಲುಕಿ ಹಾಕಿಕೊಂಡಿದ್ದ ಪ್ರದೇಶವು ಕುಖ್ಯಾತ ಜನರನ್ನು ಹೊಂದಿದ್ದ ಸ್ಥಳವು ಆಗಿತ್ತು. ಪಿಎಸೈ ಮಹಾಂತೇಶ ಹಾಗೂ ಅಫರಾಧ ದಳದ ಸಿಬ್ಬಂದಿ ಶ್ರೀಕಾಂತ ಕಟಬರ ಅವರು ಓರಿಸ್ಸಾಕ್ಕೆ ತೆರಳಿ ಗುಪ್ತವಾಗಿ ಯುವತಿಯ ಇದ್ದಲ್ಲಿಯ ಮಾಹಿತಿ ಸಂಗ್ರಹಿಸಿ, ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿದ್ದಾರೆ. ಯುವತಿಯನ್ನು ಓರಿಸ್ಸಾದಿಂದ ಕರೆ ತರಲಾಗುತ್ತಿದೆ.
ಎದೆಗಾರಿಕೆ ಪ್ರದರ್ಶಿಸಿ ಓರಿಸ್ಸಾದಿಂದ ರಕ್ಷಣೆ ಮಾಡಿ ತಂದ ಪಿಎಸೈ ಮಹಾಂತೇಶ ಹಾಗೂ ಅಫರಾಧ ದಳದ ಸಿಬ್ಬಂದಿ ಶ್ರೀಂಕಾತ ಕಟಬರ ಅವರ ಕಾರ್ಯ ಸಾಧನಗೆ ಪ್ರಶಂಸೆ ವ್ಯಕ್ತವಾಗಿದೆ. ಸಿಪಿಐ ಸಂತೋಷ ಶೆಟ್ಟಿ ಹಾಗೂ ಪಿಎಸೈ ಪ್ರವೀಣಕುಮಾರ ಮಾರ್ಗದರ್ಶನ ಮಾಡಿದ್ದರು.
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE
