ಜೋಯಿಡಾ : ತಾಲೂಕಾ ಕುಣಬಿ ಸಮಾಜ ಅಭಿವೃದ್ಧಿ ಸಂಘದ ವತಿಯಿಂದ ಜೋಯಿಡಾ ತಾಲೂಕಿನ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ಒದಗಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ಕಲ್ಯಾಣ ಸಚಿವರು ಉಮೇಶ ಕತ್ತಿ ಅವರಿಗೆ ಜೋಯಿಡಾ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕುಣಬಿ ಸಮಾಜದ ಅಧ್ಯಕ್ಷ ಅಜಿತ ಮಿರಾಶಿ ಜೋಯಿಡಾ ತಾಲೂಕು ಹಳ್ಳಿಗಳಿಂದಲೇ ಕೂಡಿದ ತಾಲೂಕಾಗಿದ್ದು ವಿದ್ಯುತ್ ಸಮಸ್ಯೆ ಇಲ್ಲಿ ಹೆಚ್ಚಿದೆ ,ಕಳೆದ 2 ವರ್ಷಗಳಿಂದ ಸೀಮೆ ಎಣ್ಣೆ ಬಂದ ಮಾಡಿದ ಕಾರಣ ಜನರಿಗೆ ಬಹಳ ಸಮಸ್ಯೆ ಉಂಟಾಗಿದೆ. ಇಲ್ಲಿ ಮಳೆ ಹೆಚ್ಚಾಗಿ ಆಗುವ ಕಾರಣದಿಂದ ಮರಗಳು ಧರೆಗುರುಳಿ ವಿದ್ಯುತ್ ವಾರಗಟ್ಟಲೇ ಇರುವುದಿಲ್ಲ ಮತ್ತು ಕೆಲ ಹಳ್ಳಿಯಲ್ಲಿ ಇನ್ನೂ ವಿದ್ಯುತ್ ಪೂರೈಕೆ ಇಲ್ಲ, ತಾಲೂಕಿನಲ್ಲಿ ಕುಣಬಿ ಸಮಾಜದವರು ಅಧಿಕ ಸಂಖ್ಯೆಯಲ್ಲಿ ಇದ್ದು ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ದಿನನಿತ್ಯ ಕಷ್ಟ ಅನುಭವಿಸುವಂತಾಗಿದೆ. ಕೂಡಲೇ ನಮ್ಮ ತಾಲೂಕಿನ ಜನರಿಗೆ ತಿಂಗಳಿಗೆ 5 ಲೀ ಸೀಮೆಎಣ್ಣೆ ಒದಗಿಸುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಣಬಿ ಸಮಾಜ ಕಾರ್ಯದರ್ಶಿ ವಿಷ್ಣು ಡೆರೇಕರ್, ರವಿ ಮೀರಾಶಿ, ಮಾಬಳು ಕುಂಡಲ್ಕರ್, ಜಯಾನಂದ ಡೇರೆಕರ್, ಸುಭಾಷ್ ವೇಳಿಪ್, ಪಾಂಡುರಂಗ ಗಾವಾಡ, ಶಂಕರ್ ವೆಳಿಪ್, ದಿವಾಕರ್ ಕುಂಡಲ್ಕರ್, ಸುರೇಶ್ ಡೇರೆಕರ್, ನಾಮದೇವ ಗಾವಾಡಾ, ಪ್ರಸನ್ನ ಗಾವಡಾ, ದತ್ತಾ ಮೀರಾಶಿ, ಉಪಸ್ಥಿತರಿದ್ದರು ,
ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/FwQPbtH4lkpE71sGaWxRXj
