ಗೋಕರ್ಣ : ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮಾನಭಂಗ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೊಸ್ಕಟ್ಟಾದ ರಾಮಾ ವೆಂಕಟರಮಣ ಹೊಸ್ಕಟ್ಟಾ ಆರೋಪಿಯಾಗಿದ್ದಾನೆ.
ಘಟನೆಯ ವಿವರ :
ಆರೋಪಿ ರಾಮಾ ವೆಂಕಟರಮಣ ಹೊಸ್ಕಟ್ಟಾ ಇತನು ಹೊಸ್ಕಟ್ಟಾದ ಮನೆಯೊಂದಕ್ಕೆ ಅಕ್ರಮ ಪ್ರವೇಶ ಮಾಡಿ, ಮನೆಯಲ್ಲಿದ್ದ ಮಹಿಳೆಯೊಂದಿಗೆ ನಾನು ನಿನ್ನ ಜೊತೆ ಕಾಲ ಕಳೆಯಬೇಕು ಎಂದು ಹೇಳಿದ್ದಾನೆ. ಇದಕ್ಕೆ ಸ್ಪಂದಿಸದ ಮಹಿಳೆ ಇಂತಹ ಮಾತು ಸರಿಯಲ್ಲಾ ಎಂದು ಆಕ್ಷೇಪ ವ್ಯಕ್ತಪಡಿಸಿದಾಗ, ಆಕೆಯ ಬಟ್ಟೆ ಹರಿದು ಮಾನಭಂಗಕ್ಕೆ ಪ್ರಯತ್ನಿಸಿದ್ದಾನೆ ಎಂದು ಸಂತ್ರಸ್ತ ಮಹಿಳೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ.
ಪಿಎಸೈ ಸುಧಾ ಅಘನಾಶಿನಿ ಪ್ರಕರಣ ದಾಖಲಿಸಿ, ಮಹಿಳೆಗೆ ರಕ್ಷಣೆ ನೀಡಿದ್ದಾರೆ.
ಗೋಕರ್ಣದ ನ್ಯೂಸ್ update ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/KwQAr2EktMuFhsy21c1GoC