ಅಂಕೋಲಾ : ವಿಶ್ವ ವೈದ್ಯರ ದಿನಾಚರಣೆ ನಿಮಿತ್ತ ವೈದ್ಯಕೀಯ ವೃತ್ತಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮಕ್ಕಳ ತಜ್ಞ ಡಾ.ಮನೋಹರ ಜಠಾರರನ್ನು ರೂರಲ್ ರೋಟರಿ ಕ್ಲಬ್‍ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ರೂರಲ್ ರೋಟರಿ ನೂತನ ಅಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿ ವೈದ್ಯರನ್ನು ದೇವರ ಸ್ವರೂಪ ಎಂದು ಭಾವಿಸುವ ಸಂಪ್ರದಾಯ ನಮ್ಮಲ್ಲಿದೆ.ಅವರ ನಿಸ್ವಾರ್ಥ ಸೇವೆಯಿಂದ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಮನೋಹರ ಜಠಾರ ಕೋವಿಡ್ ನಂತಹ ಕೆಟ್ಟ ಪರಿಸ್ಥಿತಿಯಲ್ಲಿ ವೈದ್ಯರು ಹಾಗೂ ವೈದ್ಯ ಸಿಬ್ಬಂದಿಗಳು ಜಗತ್ತೇ ಬೆರಗಾಗುವಂತಹ ಸಾಧನೆ ಮಾಡಿದ್ದಾರೆ.ಅಂತಹ ಎಲ್ಲಾ ವೈದ್ಯರು ನಿಜಕ್ಕೂ ಮಂಚೂಣಿ ಯೋಧರು. ರೂರಲ್ ರೋಟರಿ ಅವರನ್ನು ಹುರಿದುಂಬಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ” ಎಂದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಪ್ರವೀಣ ಶೆಟ್ಟಿ, ಖಜಾಂಚಿ ಸಾಯಿಶ್ ಕೇಣಿಕರ್, ನಿಕಟಪೂರ್ವ ಅಧ್ಯಕ್ಷ ಸಂತೋಷ ಕೇಣಿಕರ, ಸದಸ್ಯರಾದ ಡಾ.ಸಂಜು ನಾಯಕ, ತುಳಸಿದಾಸ ಕಾಮತ, ಶಿವಾನಂದ ನಾಯಕ, ವಿನಾಯಕ ಕಾಮತ, ಯೋಗಿತಾ ಕಾಮತ, ರಾಘವೇಂದ್ರ ರೇವಣಕರ್, ರವಿ ನಾಯಕ ಸೇರಿದಂರೆ ಮುಂತಾದವರು ಇದ್ದರು.

ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/HyQE3CIKWEICSXQCoirwQE