ಗೋಕರ್ಣ : ಹೊಸ್ಕಟ್ಟಾದಲ್ಲಿ ನಡೆದ ಮಾನಭಂಗಕ್ಕೆ ಪ್ರಯತ್ನ ಪ್ರಕರಣಕ್ಕೆ ಹೊಸ ತಿರವು ಸಿಕ್ಕಿದೆ. ನಾನು ಯಾವುದೇ ಮಾನಭಂಗಕ್ಕೆ ಪ್ರಯತ್ನ ಮಾಡಿಲ್ಲ. ಬಿಸಿಯೂಟದ ಅಡುಗೆಯವರ ನೇಮಕಾತಿ ವಿಚಾರಕ್ಕೆ ಸಂಬಂದಿಸಿದಂತೆ ನನ್ನನ್ನುಅಡ್ಡಗಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆಎಂದುರಾಮಾ ವೆಂಕಟರಮಣ ಹೊಸ್ಕಟ್ಟಾಅವರು11 ಜನರ ಮೇಲೆ ದೂರು ನೀಡಿದ ಹಿನ್ನಲೆಯಲ್ಲಿ, ಪೊಲೀಸ್ ಪ್ರಕರಣದಾಖಲಾಗಿದೆ.
ನಾನು ಕುಡಿಯುವ ನೀರುತರಲು ಹೊಸ್ಕಟ್ಟಾ ಶಾಲೆಯ ಹತ್ತಿರದಕಾಲುದಾರಿಯಲ್ಲಿ ಹೋಗುತ್ತಿರುವಾಗ ಗುಂಪಾಗಿ ಬಂದವರು ಏಕಾಏಕಿ ಅಡುಗೆಯವರನ್ನು ಬದಲಾಯಿಸಿದಕ್ಕೆ ಕೇಳಲು ನೀನ್ಯಾರುಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ಕಬ್ಬಿಣದ ಪಟ್ಟಿಯಿಂದ ಹೊಡೆದುಗಾಯ ಪಡಿಸಿ, ಜೀವ ಬೆದರಿಕೆ ಹಾಕಿದ್ದಾರೆ.ನನ್ನನ್ನು ಕೊಲೆ ಮಾಡುವಉದ್ದೇಶದಿಂದ ಈ ಕೃತ್ಯಎಸೆಗಲಾಗಿದೆಎಂದುರಾಮಾ ವೆಂಕಟರಮಣ ಹೊಸ್ಕಟ್ಟಾದೂರು ನೀಡಿದ್ದಾರೆ.
ಮಾರಣಾಂತಿಕ ಹಲ್ಲೆಗೈದಆರೋಪದ ಮೇಲೆ ಗಣಪತಿದಯಾನಂದ ಹೊಸ್ಕಟ್ಟಾ, ಪ್ರಮೋದದಯಾನಂದ ಹೊಸ್ಕಟ್ಟಾ, ಶ್ರೀನಿವಾಸ ದಾನು ಹೊಸ್ಕಟ್ಟಾ, ಮಹೇಶ ದಾನು ಹೊಸ್ಕಟ್ಟಾ, ನವೀನ ನಾಗೇಶ ಹೊಸ್ಕಟ್ಟಾ, ಜೈವಂತಗೋವಿಂದ ಹೊಸ್ಕಟ್ಟಾ, ಚಂದ್ರಕಾಂತ ಶಿವು ಹೊಸ್ಕಟ್ಟಾ, ದಯಾನಂದರಾಮಾ ಹೊಸ್ಕಟ್ಟಾ ಸೇರಿದಂತೆಇನ್ನು ಮೂರು ಮಹಿಳೆಯರ ಮೇಲೆ ಪ್ರಕರಣದಾಖಲಾಗಿದೆ.
ಪಿಎಸೈ ರವೀಂದ್ರ ಬಿರಾದಾರಅವರುIPಅ 1860 (U/s-143,147,148,341,324,307,504,506,109,149)ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಂಡಿದ್ದಾರೆ.ಮಾರಣಾಂತಿಕ ಹಲ್ಲೆಗೊಳಗಾದ ರಾಮಾ ವೆಂಕಟರಮಣ ಹೊಸ್ಕಟ್ಟಾಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಗೋಕರ್ಣದ ನ್ಯೂಸ್ update ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/KwQAr2EktMuFhsy21c1GoC