ಹೊನ್ನಾವರ : ಪತ್ನಿಯ ಮೇಲೆ ಸಂಶಯ ವ್ಯಕ್ತಪಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಅಮಾನುಷ ಘಟನೆ ಹೊನ್ನಾವರ ತಾಲೂಕಿನ ಕಡತೋಕಾದಲ್ಲಿ ನಡೆದಿದೆ.

ಶಿರಶಿಯ ಮರಾಠಿಕೊಪ್ಪದ ಮಂಜುನಾಥ ವೆಂಕಟ್ರಮಣ ಶೆಟ್ಟಿ ಆರೋಪಿಯಾಗಿದ್ದಾನೆ. ಆಶಾ ಮಂಜುನಾಥ ಶೆಟ್ಟಿ ಗಂಡನಿಂದ ಹಲ್ಲೆಗೊಳಗಾದ ಗೃಹಿಣಿಯಾಗಿದ್ದು, ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯ ಮಂಜುನಾಥ ಶೆಟ್ಟಿ ಅವರ ತಮ್ಮ ನರಸಿಂಹ ವೆಂಕಟ್ರಮಣ ಶೆಟ್ಟಿ ಈ ಬಗ್ಗೆ ದೂರು ನೀಡಿದ್ದು, ಶಿರಶಿಯ ಮರಾಠಿಕೊಪ್ಪದಲ್ಲಿ ವಾಸವಾಗಿರುವ ನನ್ನ ತಮ್ಮ ಮಂಜುನಾಥ ವೆಂಕಟ್ರಮಣ ಶೆಟ್ಟಿ ಈತನ ಮೊದಲನಿಂದಲೂ ಅವನ ಹೆಂಡತಿಯ ಮೇಲೆ ಸಂಶಯದಿಂದ ನೋಡುವದು, ವಿನಾಕಾರಣ ಅವಳಿಗೆ ಕಿರುಕುಳ ನೀಡುತ್ತಾ ಬಂದಿದ್ದ. ಈ ಬಗ್ಗೆ ನಾವು ಅಣ್ಣತಮ್ಮಂದಿರು ಬಹಳ ಸಲ ಅವನಿಗೆ ಬುದ್ದಿವಾದ ಹೇಳಿದ್ದೇವು.

ನನ್ನ ತಮ್ಮ ಮಂಜುನಾಥನ ಮಗಳಾದ ಸಂಗೀತಾ ಇವಳಿಗೆ ಅನಾರೋಗ್ಯವಿದ್ದರಿಂದ, ಅವರ ಹತ್ತಿರ ಚಿಕಿತ್ಸೆಗೆ ಹಣ ಇಲ್ಲದೇ ಇದ್ದುದರಿಂದ, ನಾವು ಅಣ್ಣತಮ್ಮಂದಿರು ಸೇರಿ ಕಳೆದ ಒಂದು ತಿಂಗಳ ಹಿಂದೆ ಶಿವಮೊಗ್ಗಾದಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ನಂತರ ಶಿರಶಿಯಿಂದ ನನ್ನ ತಮ್ಮನ ಹೆಂಡತಿ ಆಶಾ ಮತ್ತು ಅವಳ ಮಗಳು ಸಂಗೀತಾ ಇಬ್ಬರೂ ಕಳೆದ ಒಂದು ತಿಂಗಳಿಂದ ನನ್ನ ತಮ್ಮ ಗೋಪಾಲನ ಮನೆಯಲ್ಲಿ ಬಂದು ಉಳಿದುಕೊಂಡಿದ್ದರು. ನಾವು ಅಣ್ಣ ತಮ್ಮಂದಿರು ಸೇರಿ ಸಂಗೀತಾಳ ಚಿಕಿತ್ಸೆಯ ಖರ್ಚುವೆಚ್ಚವನ್ನು ನೋಡಿಕೊಳ್ಳುತ್ತಿದ್ದವು.

ಹೀಗಿರುವಾಗ ಶುಕ್ರವಾರ ರಾತ್ರಿ ನಾವೆಲ್ಲರೂ ಊಟ ಮಾಡಿ ಮನೆಯಲ್ಲಿ ಮಲಗಿದ್ದ ವೇಳೆ, ರಾತ್ರಿ ಸುಮಾರು 12-00 ಗಂಟೆ ಸುಮಾರಿಗೆ ನನ್ನ ತಮ್ಮ ಮಂಜುನಾಥ ವೆಂಕಟ್ರಮಣ ಶೆಟ್ಟಿ ಅವನ ಪತ್ನಿಗೆ ಅವಾಚ್ಯವಾಗಿ ಬೈದು, ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಮೈಮೇಲೆ ಸಿಕ್ಕಸಿಕ್ಕಲ್ಲಿ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದ್ದು, ಸಿಪಿಐ ಶ್ರೀಧರ ಎಸ್.ಆರ್. ತನಿಖೆ ಕೈಗೊಂಡಿದ್ದಾರೆ

ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/HyQE3CIKWEICSXQCoirwQE