ಗೋಕರ್ಣ : ಗಂಗೇಕೊಳ್ಳದ ಸರಕಾರಿ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಂಕೋಲಾದ ಶಾಂತಿ ದಂತ ಚಿಕಿತ್ಸಾಲಯದ ವತಿಯಿಂದ ಉಚಿತ ದಂತ ತಪಾಸಣೆ ಮತ್ತು ತಿಳಿವಳಿಕೆ ಶಿಬಿರ ನಡೆಸಲಾಯಿತು.
ಶಾಂತಿ ದಂತ ಚಿಕಿತ್ಸಾಲಯದ ದಂತ ವೈದ್ಯ ಡಾ. ಸಂಜು ನಾಯಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಮನುಷ್ಯನಲ್ಲಿ ಹಲ್ಲು ಅತಿಮುಖ್ಯ ಅಂಗ. ಹಲ್ಲು ಹಾಳಾದರೆ ದೇಹದ ಆರೋಗ್ಯ ಹಾಳಾಗುತ್ತದೆ. ಆದರಿಂದ ಹಲ್ಲನ್ನು ಸರಿಯಾಗಿ ರಕ್ಷಿಸಿಕೊಂಡು ಹೋಗಬೇಕು ಎಂದರು.
ಶಾಲೆಯ ಮುಖ್ಯೋಧ್ಯಾಪಕ ಉದಯ ನಾಯಕ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿಯರಾದ ಕಲಾವತಿ ಶೇಡಗೆರಿ, ಸಾವಿತ್ರಿ ನಾಯಕ, ಕಲ್ಪನಾ ನಾಯಕ, ಸಂಗೀತಾ ಲಕ್ಷ್ಮೇಶ್ವರ ಮತ್ತು ರಜನಿ ಗೌಡ ಉಪಸ್ಥಿತರಿದ್ದರು.
ಗೋಕರ್ಣದ ನ್ಯೂಸ್ update ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/KwQAr2EktMuFhsy21c1GoC