ಗೋಕರ್ಣ : ಇಲ್ಲಿನ ಮುಖ್ಯ ಕಡಲತೀರದಲ್ಲಿ ದುರ್ಗಾ ದೇವಿಯ ಮೂರ್ತಿ ಪತ್ತೆಯಾಗಿ ಗಮನ ಸೆಳೆದಿದೆ.

ಭಾನುವಾರ ಸಂಜೆ ಈ ದೇವಿಯ ಮೂರ್ತಿ ಕಂಡುಬಂದಿದ್ದು ಸ್ಥಳೀಯರು ಹಾಗೂ ಪ್ರವಾಸಿಗರು ಮೂರ್ತಿಯನ್ನ ಕೂತುಹಲದಿಂದ ವೀಕ್ಷಣೆಗೆ ತೊಡಗಿದ್ದಾರೆ.

ಏಕಾಏಕಿ ಪತ್ತೆಯಾದ ಈ ಮೂರ್ತಿಯನ್ನು ಕಂಡ ಸ್ಥಳೀಯರು ಗ್ರಾಮ ಪಂಚಾಯಕ್ಕೆ ವಿಷಯ ಮುಟ್ಟಿಸಿದ್ದರು.
ಕುಮಟಾ ತಹಸೀಲ್ದಾರ ಅವರು ಮೂರ್ತಿಯನ್ನು ಪುರಾತತ್ವ ಇಲಾಖೆಗೆವಹಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಭಗ್ನಗೊಂಡ ಮೂರ್ತಿಗಳನ್ನು ಸಮುದ್ರಕ್ಕೆ ಬಿಡುವ ಸಂಪ್ರದಾಯ ಕರಾವಳಿಯ ಭಾಗದಲ್ಲಿದೆ. ಬಹುಷ ಇದೇ ಮೂರ್ತಿ ನೀರಿನ ಒತ್ತಡಕ್ಕೆ ಸಮುದ್ರದ ಕಡಲತೀರಕ್ಕೆ ಬಂದಿರಬಹುದು ಎಂದು ಸ್ಥಳೀಯರಾದ ಗಜಾನನ ರಾಮ ನಾಯಕ ತಿಳಿಸಿದ್ದಾರೆ

ಗೋಕರ್ಣದ ನ್ಯೂಸ್ update ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/KwQAr2EktMuFhsy21c1GoC