ಜೋಯಿಡಾ :ತಾಲೂಕಿನ ಗಡಿ ಭಾಗವಾದ ಅನಮೋಡ ಘಟ್ಟದ ಬಳಿ ಹೆಚ್ಚಿನ ಮಳೆಯಾದ ಕಾರಣ ಗುಡ್ಡ ಕುಸಿದು ಗೋವಾ – ಅನಮೋಡ ರಾಷ್ಟ್ರೀಯ ಹೆದ್ದಾರಿ ಸಧ್ಯ ಸ್ಥಗಿತಗೊಂಡಿದೆ.

ಗೋವಾ ಗಡಿಯಲ್ಲಿ ಗುಡ್ಡ ಕುಸಿದ್ದಿದ್ದು ಸಧ್ಯ ಗುಡ್ಡ ತೆರವು ಕಾರ್ಯ ನಡೆಸಿದ್ದು ವಾಹನಗಳನ್ನು ಈ ರಸ್ತೆಯಲ್ಲಿ ಬಿಡುತ್ತಿಲ್ಲ. ಗೋವಾಕ್ಕೆ ಸಾಗಬೇಕಾದ ಸಾಕಷ್ಟು ವಾಹನಗಳು ರಸ್ತೆಯಲ್ಲಿ ನಿಂತುಕೊಂಡಿದೆ.

ಗುಡ್ಡ ಕುಸಿತದಿಂದಾಗಿ ರಸ್ತೆ ಯಲ್ಲಿ ದೊಡ್ಡ ದೊಡ್ಡ ಕಲ್ಲು ಮತ್ತು ಮಣ್ಣು ತುಂಬಿಕೊಂಡಿದ್ದು ಜೆಸಿಬಿ ಗಳನ್ನು ಬಳಸಿ ರಸ್ತೆಯ ಸುಗಮ ಸಂಚಾರಕ್ಕೆ ಕಾರ್ಯಾಚರಣೆ ನಡೆಯುತ್ತಿದೆ.

ಹೆಚ್ಚಿನ ಮಳೆಯಾದ ಕಾರಣ ಗುಡ್ಡ ಕುಸಿತ ಸಂಭವಿಸುತ್ತಿದ್ದು ಅಣಶಿ ಭಾಗದಲ್ಲು ಗುಡ್ಡ ಕುಸಿತ ಸಂಭವಿಸಿದೆ. ಮಳೆಗಾಲದಲ್ಲಿ ಜೋಯಿಡಾ ತಾಲೂಕಿನ ಹಲವೆಡೆ ಗುಡ್ಡ ಕುಸಿತಗಳು ಸಂಭವಿಸುತ್ತಿದ್ದು ತಾಲೂಕಿನ ಅಧಿಕಾರಿಗಳು ಕೂಡಲೇ ಸಮಸ್ಯೆಗೆ ಸ್ಪಂದಿಸಿ ಜನರ ಕಷ್ಟಕ್ಕೆ ನೆರವಾಗಬೇಕಿದೆ.

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/FwQPbtH4lkpE71sGaWxRXj