ಜೋಯಿಡಾ -: ತಾಲೂಕಿನ ನಂದಿಗದ್ದಾದಲ್ಲಿ ಭಾರಿ ಗಾಳಿ ಮಳೆಯಿಂದಾಗಿ ಮರವೊಂದು ಬಿದ್ದು ಎರಡು ಬೈಕಗಳು ಜಖಂಗೊಂಡ ಘಟನೆ ನಡೆದಿದೆ.

ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ದೊಡ್ಡ ಮರವೊಂದು ಅಪ್ಪಳಿಸಿದ ಪರಿಣಾಮ ನಂದಿಗದ್ದಾದ ಜನತಾ ಕಾಲೋನಿ ಬಳಿ ಕೆಲ ಕಾಲ ವಾಹನಗಳ ಓಡಾಟಕ್ಕೆ ಸಮಸ್ಯೆ ಉಂಟಾಯಿತು.

ಭಾರೀ ಗಾತ್ರದ ಮರವಾದ್ದರಿಂದ ರಸ್ತೆ ಪಕ್ಕದ ಶೆಡ್ಡನಲ್ಲಿ ಇದ್ದ ಪಿಂಟೂ ಫರ್ನಾಂಡೀಸ್ ಎಂಬುವವರ ಅವರ ಬೈಕ ಮೇಲೆ ಮರ ಬಿದ್ದು ಬೈಕ ನುಜ್ಜುಗುಜ್ಜಾಗಿದೆ.

ಕಳೆದ ಎರಡು ದಿನಗಳಿಂದ ಜೋಯಿಡಾ ತಾಲೂಕಿನಾಧ್ಯಂತ ಮಳೆಯ ಪ್ರಮಾಣ ಹೆಚ್ಚಾಗಿದ್ದು ಮರ ಗಿಡಗಳು ಬಿದ್ದು ಹಾನಿ ಉಂಟಾಗುತ್ತಿವೆ.

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/FwQPbtH4lkpE71sGaWxRXj