ಅಂಕೋಲಾ : ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸಿದ್ದ ವೇಳೆ ಜಿಲ್ಲಾ ಪೊಲೀಸ್ ವಿಶೇಷ ಅಪರಾಧ ವಿಭಾಗದ ತಂಡ ನಡೆಸಿ ದಾಳಿ ನಡೆಸಿ ನಾಲ್ಕು ಆರೋಪಿಗಳನ್ನು ಬಂಧಿಸಿ, ಜಿಂಕೆಯ ಕೊಂಬು ಹಾಗೂ ಅಫರಾಧ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಕಲ್ಲೇಶ್ವರದ ವಂಡರ ಮನೆಯ ಗ್ರಾಮದವರಾದ ಸೂರಜ್ ಶೀಧರ ಭಂಡಾರಿ, ಸಂದೀಪ ದಯಾನಂದ ಭಂಡಾರಿ, ಪ್ರಸಾದ ರಾಮಾ ದೇಸಾಯಿ ಹಾಗೂ ಹಳಿಯಾಳ ತಾಲೂಕಿನ ಜನಗಾ, ಜತಗಾ ಗ್ರಾಮದ ಶೌಕತ್‌ಸಾಬ್ ಹುಸೇನ್ ಸಾಬ್ ಮುಜಾವರ ಬಂಧಿತ ಆರೋಪಿಗಳು.

ಘಟನೆಯ ವಿವರ :
ಕಳೆದ 3 ವರ್ಷಗಳ ಹಿಂದೆ ರಾಮನಗುಳಿ ಅರಣ್ಯ ಪ್ರದೇಶದಲ್ಲಿ ಜಿಂಕೆಯ ತಲೆ ಬುರುಡೆ ಸಹಿತ ಇರುವ ಒಂದು ಕೊಂಬು ಮತ್ತು ಇನ್ನೊಂದು ಜಿಂಕೆಯ ಒಂದು ಬದಿಯ ಒಂದು ಕೊಂಬನ್ನು ದೊರೆತಿತ್ತು. ಇದನ್ನು ಕಾರಿನಲ್ಲಿ ಗೋಣಿ ಚೀಲದಲ್ಲಿ ಹಾಕಿಕೊಂಡು ಕಲ್ಲೇಶ್ವರದಿಂದ ಮಾಸ್ತಿಕಟ್ಟಾಗೆ ಬಂದು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಜಿಲ್ಲಾ ಪೊಲೀಸ್ ವಿಶೇಷ ಅಪರಾಧ ವಿಭಾಗದ ಪಿಎಸೈ ಪ್ರೇಮನಗೌಡ ಪಾಟೀಲ್ ಅವರ ನೇತ್ರತ್ವದ ತಂಡ ದಾಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನಾ ಡಿ. ಪೆನ್ನೇಕರರವರ ಮಾಹಿತಿ ಮೇರೆಗೆ, ಡಿವೈಎಸ್ಪಿ ವೈಲೆಂಟನ್ ಡಿಸೋಜಾರವರ ಮಾರ್ಗದರ್ಶನದಲ್ಲಿ, ಉಕ ಜಿಲ್ಲಾ ವಿಶೇಷ ಅಪರಾಧ ವಿಭಾಗದ ಪಿಎಸೈ ಪ್ರೇಮನಗೌಡ ಪಾಟೀಲ್, ಸಿಬ್ಬಂದಿಗಳಾದ ಮಹಮ್ಮದ ಶಫಿ, ರಾಘವೇಂದ್ರ ಜಿ. ನಾಯ್ಕ, ಭಗವಾನ ಗಾಂವಕರ, ವಿರೇಶ ನಾಯ್ಕ, ಸಂತೋಷಕುಮಾರ ಕೆ.ಬಿ.ರವರ ತಂಡದ ಜೊತೆಯಲ್ಲಿ ಅಂಕೋಲಾ ಪೊಲೀಸ ಠಾಣೆಯ ಪೊಲೀಸ ನಿರೀಕ್ಷಕ ಸಂತೋಷ ಶೆಟ್ಟಿ ಮುಂದಾಳತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಯಶಸ್ವಿ ಕಾರ್ಯಾಚರನೆ ನಡೆಸಿ, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಪೊಲೀಸ ವರಿಷ್ಠಾಧಿಕಾರಿ ಡಾ. ಸುಮನಾ ಡಿ. ಪೆನ್ನೇಕ ಹಾಗೂ ಹೆಚ್ಚವರಿ ಪೊಲೀಸ್ ಅಧೀಕ್ಷಕ ಎಸ್. ಬದ್ರಿನಾಥ ಅಭಿನಂದಿಸಿದ್ದಾರೆ.