ಜೊಯಿಡಾ : ಭಾನುವಾರ ಉಳವಿಗೆ ಬರುವ ಪ್ರವಾಸಿಗರು ಅರಣ್ಯದಲ್ಲಿ ರಸ್ತೆ ಪಕ್ಕದಲ್ಲಿ ಎಲ್ಲೆಂದರೆ ಅಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ. ಈ ರೀತಿ ಬೇಕಾಬಿಟ್ಟಿ ಪ್ಲಾಸ್ಟಿಕ್ ಎಸೆಯುವುದರಿಂದ ಪರಿಸರಕ್ಕೆ ನಾನಾ ರೀತಿಯ ಹಾನಿಯಾಗುತ್ತದೆ ಎಂದು ಧಾರವಾಡ ಜಿ.ಎಸ್.ಎಂ ಪ್ಲಾಸ್ಟಿಕ್ ಇಂಡಸ್ಟ್ರೀಸ್ನ ಮಾಲಕ ಶಶಿಧರ ಮದರಖಂಡಿ ಹೇಳಿದರು. ಅವರು ತಾಲೂಕಿನ ಚಾಪೇರಿ ಗ್ರಾಮದಲ್ಲಿ ವನ್ಯಜೀವಿ ವಲಯ ಗುಂದ, ಗ್ರಾಮ ಅಭಿವೃಧ್ದಿ ಸಮಿತಿ ಚಾಪೇರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಕುರಿತು ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು, ಗುಂದ ವನ್ಯಜೀವಿ ವಲಯದ ಅಧಿಕಾರಿಗಳು ಸಿಬ್ಬಂದಿಗಳು ಚಾಪೇರ ಗ್ರಾಮ ಅರಣ್ಯ ಸಮಿತಿ ಯವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅರಣ್ಯದಲ್ಲಿ ಎಸೆದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿದ್ದಾರೆ. ಅದನ್ನು ನಮ್ಮ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಗೆ ಒಯ್ದು ಪುನರ್ ಬಳಕೆ ಮಾಡುತ್ತೇವೆ ಎಂದರು.


ಉಳವಿ ಭಕ್ತ ಪ್ರಕಾಶ ಶೃಂಗೇರಿ ಮಾತನಾಡಿ ಮಡಕೇರಿ , ಚಿಕ್ಕಮಗಳೂರು ಕಡೆಗಳಲ್ಲಿ ಅಲ್ಲಿನ ಗ್ರಾಮಸ್ಥರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯದಂತೆ ತಿಳಿ ಹೇಳುತ್ತಾರೆ. ಅದೇ ರೂಡಿಯನ್ನು ಇಲ್ಲಿನ ಗ್ರಾಮಸ್ಥರು ಮಾಡಿದರೆ ಉತ್ತಮ ಪರಿಸರ ಕಾಣಬಹುದು ಎಂದರು.
ಗುಂದ ವಲಯ ಅರಣ್ಯಾಧಿಕಾರಿ ರವಿಕಿರಣ ಸಂಪಗಾವಿ ಮಾತನಾಡಿ, ಪರಿಸರ ಸ್ವಚ್ಛವಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ.

ನಮ್ಮ ಆರೋಗ್ಯ ಉತ್ತಮ ವಾಗಿರಲು ನಾವು ನಮ್ಮ ಸುತ್ತ ಮುತ್ತ ತ್ಯಾಜ್ಯಗಳು, ಕೊಳಚೆಗಳು ಇಲ್ಲದಂತೆ ನೋಡಿಕೊಂಡು ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕೆಂದರು. ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ದಿಲೀಪ ಮಿರಾಶಿ, ಉಳವಿ ಮತ್ತು ನಂದಿಗದ್ದೆ ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರು ಮಾತನಾಡಿ ಪ್ಲಾಸ್ಟಿಕ್ ಮುಕ್ತ ವಲಯ ವನ್ನಾಗಿ ಮಾಡಲು ಗ್ರಾ.ಪಂ ಸಹಕರಿಸುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಗುಂದ ವಲಯದಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಧಾರವಾಡದ ಉದ್ಯಮಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಗುಂದ ವನ್ಯಜೀವಿ ವಲಯದ ಡಿ.ಆರ್ ಉಪಸ್ಥಿತರಿದ್ದರು.

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/FwQPbtH4lkpE71sGaWxR