ಜೋಯಿಡಾ – 9 ಜುಲೈ
ತಾಲೂಕಿನ ಕಾತೇಲಿ ಗ್ರಾಮ ಪಂಚಾಯತ ಕುಂಡಲ ಮತ್ತು 6 ಗ್ರಾಮಗಳ ಕಾನೇರಿ ಡ್ಯಾಮ ಹಿನ್ನೀರಿನಿಂದ ಸಂಪರ್ಕ ಕಡಿದಿತ್ತು. ಗ್ರಾಮ ಪಂಚಾಯತ ಕಾತೇಲಿ ಹಾಗೂ ತಾಲೂಕಾಡಳಿತದಿಂದ ರಾಫ್ಟಿಂಗ್ ದೋಣಿ ವ್ಯವಸ್ತೆಮಾಡಿ ಸಂಪರ್ಕ ಅನುಕೂಲಮಾಡಲಾಗಿದೆ.
ಕಳೆದ ಒಂದು ವಾರದಿಂದ ಕಾನೇರಿ ನದಿ ತುಂಬಿ ಹರಿದು ಸೇತುವೆ ಮುಳುಗಿದ್ದರಿಂದ ಕುಂಡಲ, ಘಟ್ಟಾವ, ಕುರಾವಲಿ, ನವರ, ಆದಗಾಂವ, ದೇವಸ ಸೇರಿ 6 ಗ್ರಾಮಗಳ ಸಂಪರ್ಕ ಕಡಿದಿತ್ತು. ಸಾವಿರಾರು ಜನರು ಸಂಪರ್ಕ ಇಲ್ಲದೇ ಗ್ರಾಮಗಳಲ್ಲಿ ಇದ್ದರು. ಮುಖ್ಯ ಕೇಂದ್ರಕ್ಕೆ ಬರುವವರು, ಅನಾರೋಗ್ಯಗೊಂಡವರು ತೊಂದರೆ ಅನುಭವಿಸುತಿದ್ದರು.
ಘಟ್ಚಾವ ನಡುಗಡ್ಡೆಯಲ್ಲಿ ಜನರ ಭೀತಿ
ತಾಲೂಕಿನ ಘಟ್ಚಾವ ಗ್ರಾಮ ಕಳೆದ ಒಂದುವಾರದಿಂದ ಜಲದಿಗ್ಬಂದನವಾಗಿತ್ತು.12 ಕುಟುಂಬಗಳ 120 ಜನ ದಿಕ್ಕು ಕಾಣದಾಗಿದ್ದರು. ಎಚ್ಚೆತ್ತ ತಾಲೂಕಾಡಳಿತ ದೋಣಿ ವ್ಯವಸ್ತೆ ಕಲ್ಪಿಸಿದೆ.
ತಹಶಿಲ್ದಾರ ಸಂಜಯ ಕಾಂಬಳೆ,ಇ ಓ ಆನಂದ ಬಡಕುಂದ್ರಿ ಉಪಸ್ಥಿತಿಯಲ್ಲಿ ಈ ಕಾರ್ಯ ನಡೆಯಿತು.
ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/FwQPbtH4lkpE71sGaWxRXj
