ಜೋಯಿಡಾ : ತಾಲೂಕಿನ ಅಣಶಿ ಘಟ್ಟದಲ್ಲಿ ಹೆಚ್ಚಿನ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಗಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ನಿನ್ನೆ ಸಂಜೆ ಸುರಿದ ಬಾರಿ ಮಳೆಯಿಂದಾಗಿ ಗುಡ್ಡ ಕುಸಿದು ರಸ್ತೆಗೆ ಬಂದಿದ್ದು ವಾಹನ ಸವಾರರು ರಸ್ತೆಯಲ್ಲಿ ಮಣ್ಣು ಕಲ್ಲುಗಳು ಬಂದು ಬಿದ್ದ ಕಾರಣ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈಗಾಗಲೇ ಜೋಯಿಡಾ ತಹಶಿಲ್ದಾರರರು ರಾತ್ರಿ ವೇಳೆಯಲ್ಲಿ ಅಣಶಿ ಘಟ್ಟದಲ್ಲಿ ವಾಹನ ಸಂಚಾರವನ್ನು ನಿಷೇಧಿಸಿದ್ದರು, ಈಗ ಸಂಪೂರ್ಣವಾಗಿ ವಾಹನ ಸಂಚಾರ ನಿಲ್ಲಿಸಲಾಗಿದೆ.
ಬೇರೆ ಬೇರೆ ಕಡೆಗಳಲ್ಲಿ ಗುಡ್ಡ ಕುಸಿಯುತ್ತಿದ್ದು ,ಅತಿಯಾಗ ಮಳೆಯಿಂದಲೇ ಈ ರೀತಿಯಾಗುತ್ತಿದೆ. ಅಣಶಿ ಮೂಲಕವೇ ಕಾರವಾರ ,ಗೋವಾ, ಹಾಗೂ ಇನ್ನೀತರ ನಗರಗಳಿಗೆ ಸಾಗುವವರು ರಸ್ತೆ ಬದಲಿಸಬೇಕಾದ ಅನಿರ್ವಾಯತೆ ಇದೆ
ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/FwQPbtH4lkpE71sGaWxRXj
