ಅಂಕೋಲಾ : 2021 ರ IFS ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 2 ನೇ ಸ್ಥಾನ ಪಡೆದ ವರದರಾಜ ಗಾಂವಕರ ಅವರು ಶ್ರೀರಾಮ ಸ್ಟಡಿ ಸರ್ಕಲ್ ಅಂಕೋಲಾ ವಿದ್ಯಾರ್ಥಿಗಳೊಂದಿಗೆ “ಸಾಧಕರೊಂದಿಗೆ ಸಂವಾದ” ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ವರದರಾಜ ಗಾಂವಕರ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷಾ ವಿದ್ಯಾರ್ಥಿ ಕೆಲವು ವಿಶೇಷ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಾಗಿದ್ದು, ನಿರಂತರ ಓದುವಿಕೆ, ಓದಿನ ಸ್ಪಷ್ಟತೆ, ಆಯ್ಕೆಯಾಗುತ್ತೇನೆಂಬ ಆತ್ಮವಿಶ್ವಾಸ ಎಂತಹುದೇ ಸನ್ನಿವೇಶದಲ್ಲೂ ಗುರಿಯಿಂದ ಹಿಂದೆ ಸರಿಯದಿರುವುದು ಸೇವಾ ಮನೋಭಾವ ವಿದ್ಯಾರ್ಥಿಯಲ್ಲಿದ್ದರೆ ಹುದ್ದೆಗೆ ಆಯ್ಕೆಯಾಗುವುದು ಸರಳವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನಿವೃತ್ತ ಕೃಷಿ ಅಧಿಕಾರಿ ಅರವಿಂದ ನಾಯಕ ಮಾತನಾಡಿ ಅವರು ವಿದ್ಯಾರ್ಥಿಗಳಲ್ಲಿ ತಾಳ್ಮೆ, ಸಂಯಮ ಮತ್ತು ಸಹಕಾರ ಮನೋಭಾವದ ಮಹತ್ವವನ್ನು ವಿವರಿಸಿದರು.


ನಿರ್ದೇಶಕ ಸೂರಜ ನಾಯಕ ಸ್ವಾಗತಿಸಿದರು. ದಿವ್ಯಾ ಭಟ್ ಯಲ್ಲಾಪುರ ಹಾಗೂ ಸಿಂಚನಾ ಹೊನ್ನಾವರ ಪ್ರಾರ್ಥಿಸಿದರು. ವಿದ್ಯಾ ನಾಯ್ಕ ಭಟ್ಕಳ ನಿರೂಪಿಸಿದರು. ಅನಿತಾ ನಾಯ್ಕ ವಂದಿಸಿದರು.

ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE