ಶಿರಸಿ:ಇತ್ತೀಚಿನ ಕಸ್ತೂರಿ ರಂಗನ ವರದಿ ಕರಡು ಅಧಿಸೂಚನೆ ಹಾಗೂ ಶರಾವತಿ ಅಭಯಾರಣ್ಯ ಪರಿಸರ ಅತೀ ಸೂಕ್ಷ್ಮ ಪ್ರದೇಶ ನಿಗದಿಗೊಳಿಸಲು ಸುಫ್ರೀಂ ಕೋರ್ಟನ ಆದೇಶದಿಂದ ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗುವುದಲ್ಲದೇ ಅರಣ್ಯ ಭೂಮಿ ಅವಲಂಭಿತವಾಗಿರುವ ಅರಣ್ಯವಾಸಿಗಳಿಗೆ ಆತಂಕ ಉಂಟಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಹೇಳಿದ್ದಾರೆ.
ಪಶ್ಚಿಮ ಘಟ್ಟದ ಜೀವ ವೈವಿಧ್ಯರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಪರಿಸರ, ಅರಣ್ಯ ಸಚಿವಾಲಯವುಕಸ್ತೂರಿ ರಂಗನ ವರದಿಯಂತೆ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾದ ಪ್ರದೇಶದಲ್ಲಿ ಕರ್ನಾಟಕ ರಾಜ್ಯದ ವಿವಿಧ ಹತ್ತು ಜಿಲ್ಲೆಗಳಲ್ಲಿ ಒಟ್ಟು 1597 ಹಳ್ಳಿಗಳನ್ನು ಸೇರ್ಪಡಿಸಲಾಗಿದ್ದು, ಅದರಂತೆ ಉತ್ತರಕನ್ನಡ ಜಿಲ್ಲೆಯ 9 ತಾಲೂಕುಗಳಿಂದ 704 ಹಳ್ಳಿಗಳು ಸೇರ್ಪಡೆಗೊಂಡಿರುವುದು ಎಂದು ಅವರು ಹೇಳಿದರು. ಅಲ್ಲದೇ, ಈಗಾಗಲೇ ಶರಾವತಿ ಅಭಯಾರಣ್ಯ ವ್ಯಾಪ್ತಿಯ ಜುಲೈ 7, 2019 ರ ಅಧಿಸೂಚನೆಯಂತೆ ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಯ ಒಟ್ಟು 93,016 ಹೇಕ್ಟರ್ ಪ್ರದೇಶ ಸೇರಿಸಲ್ಪಟ್ಟಿದ್ದಲ್ಲದೇ, ಗುರುತಿಸಿರುವ ಅಭಯಾರಣ್ಯ ಪ್ರದೇಶದ ಗಡಿಯಿಂದ 1 ಕೀ.ಮೀ ಹೇಚ್ಚುವರಿಯಾಗಿ ಅತೀ ಸೂಕ್ಷ್ಮ ಪ್ರದೇಶ ನಿರ್ದಿಷ್ಟ ಪಡಿಸಬೇಕೆಂಬ ಇತ್ತೀಚಿನ ಸುಫ್ರೀಂಕೋರ್ಟನ ಆದೇಶದಿಂದ ಜಿಲ್ಲೆಯ ಸಂಪೂರ್ಣ ಜನಜೀವನದ ವ್ಯವಸ್ಥೆಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವಂತಾಗಿದೆ ಎಂದು ಅವರು ಹೇಳಿದರು.
ಅಭೀವೃದ್ಧಿಗೆ ಮಾರಕ :
ಕಸ್ತೂರಿರಂಗನ್ ಮತ್ತು ಅಭಯಾರಣ್ಯ ಪ್ರದೇಶದಲ್ಲಿ ಗುರುತಿಸಲಾದ ಸೂಕ್ಷ್ಮ ಪ್ರದೇಶದಲ್ಲಿ ಶಾಶ್ವತಕಟ್ಟಡ, ರಸ್ತೆ, ಕೇಂದ್ರ ಮತ್ತುರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರ್ಭಂದಿಸಿದ ಕೈಗಾರಿಕೆಗಳಿಗೆ ಕಡಿವಾಣ, ಆಧುನಿಕ ಪ್ರವಾಸೋಧ್ಯಮಕ್ಕೆ ಮಾರಕ, ಟೌನ್‍ಶಿಫ್ ಮತ್ತು ಬಹುಮಡಿಗೆ ಕಟ್ಟಡಗಳಿಗೆ ನಿರ್ಭಂದ, ವಾಣಿಜ್ಯಕರಣ ಮುಂತಾದ ನಿರ್ಭಂದಕಕೆ ಒಳಪಡುವದರಿಂದ ಗ್ರಾ ಮಸ್ಥರ ಜೀವನ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೇ ಅಭೀವೃದ್ದಿಗೆ ಮಾರಕ ಉಂಟಾಗುವುದು ಎಂದು ಅವರು ಹೇಳಿದರು.
ಜಿಲ್ಲೆಯ ಶೇ. 35 ರಷ್ಟು ಪರಿಸರ ಸೂಕ್ಷ್ಮ ಪ್ರದೇಶ :
ಕಸ್ತೂರಿರಂಗನ್ ಮತ್ತುಅಭಯಾರಣ್ಯ ಪ್ರದೇಶದ ಒಟ್ಟು ಕ್ಷೇತ್ರ ಹಾಗೂ ಈ ಪ್ರದೇಶಕ್ಕೆ ಹೇಚ್ಚುವರಿಯಾಗಿ ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸುವ ಕ್ಷೇತ್ರವನ್ನು ಜಿಲ್ಲೆಯ ಒಟ್ಟು ಭೌಗೋಳಿಕ ಕ್ಷೇತ್ರವಾದ 10,571 ಚ.ಕೀ.ಮೀ ಗೆ ತುಲನೆ ಮಾಡಿದರೆ, ಜಿಲ್ಲೆಯ ಒಟ್ಟು ಕ್ಷೇತ್ರದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಶೇ.35 ರಷ್ಟು ಆಗುವುದೆಂದು ರವೀಂದ್ರ ನಾಯ್ಕ ಹೇಳಿದ್ದಾರೆ.
ಶಿರಸಿ ನ್ಯೂಸ್ update ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ
https://chat.whatsapp.com/GhPLlofxjaR1GYrAz8Rpi7