ಅಂಕೋಲಾ : ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ರಾಜೀವ ಜಿ. ನಾಯಕ ಹಿಚ್ಕಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹಿರಿಯ ನಿವೃತ್ತ ಶಿಕ್ಷಕ ಎ.ಎಂ. ಮುಲ್ಲಾ, ಕಾರ್ಯದರ್ಶಿಯಾಗಿ ಅರವಿಂದ ಎಂ. ನಾಯಕ ಬಾಸಗೋಡ, ಸಹ ಕಾರ್ಯದರ್ಶಿಯಾಗಿ ವಾಸುದೇವ ಜಿ. ನಾಯಕ ಶಿಂಗನಮಕ್ಕಿ, ಖಜಾಂಚಿಯಾಗಿ ನಾರಾಯಣ ಬಿ. ನಾಯಕ ಸೂರ್ವೆ ಆಯ್ಕೆಯಾದರು.
ಸಂಘದ ವಿಶೇಷ ಆಮಂತ್ರಿತರಾದ ಕಾಳಪ್ಪ ಎನ್. ನಾಯಕ, ಪ್ರೊ. ಕೆ.ವಿ. ನಾಯಕ ಮಾತನಾಡಿದರು. ಕನ್ನಡ ಭವನದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಬಂಟ ವಹಿಸಿದ್ದರು.

ಕಾರವಾರ ಟೈಮ್ಸ್ ನ್ಯೂಸ್ updatesಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE