ತಾಲೂಕಿನ ಕೆ.ಎಲ್.ಇ.ಯ ಮಹಾವಿದ್ಯಾಲಯದಲ್ಲಿ ಯುವಮೋರ್ಚಾ ಅಂಕೋಲಾ ಘಟಕದ ವತಿಯಿಂದ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಅಗ್ನಿಪತ್ ಯೋಜನೆ ಕುರಿತು ಅರಿವು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ತಾಲೂಕಾಧ್ಯಕ್ಷ ಸಂಜಯ ನಾಯ್ಕ ಉದ್ಘಾಟಿಸಿ ಮಾತನಾಡಿದರು.ಕೆ.ಎಲ್.ಇ. ಸ್ಥಾನಿಕ ಸಂಸ್ಥೆಯ ಆಡಳಿತಾಧಿಕಾರಿ ಮಿಲನ್ ನಾರ್ವೆಕರ್, ಅಂಕೋಲಾ ಅರ್ಬನ್ ಬ್ಯಾಂಕನ ಅಧ್ಯಕ್ಷ ಭಾಸ್ಕರ್ ನಾರ್ವೇಕರ,ಕೆ.ಎಲ್. ಇ. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆಡಾ. ಸ್ಮೀತಾ ಫಾತರ್ಫೇಕರ್,ಯುವ ಮೋರ್ಚಾದ ಜಿಲ್ಲಾಧ್ಯಕ್ಷರು,ಪೂರ್ಣಪ್ರಜ್ಞಾ ಸಂಸ್ಥೆಯ ಕಾರ್ಯಾಧ್ಯಕ್ಷರು ಆದ ಪ್ರಶಾಂತ ನಾಯಕ, ಯುವಮೋರ್ಚಾದ ತಾಲೂಕಾಧ್ಯಕ್ಷ ಸಂತೋಷ ನಾರ್ವೇಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆ.ಎಲ್.ಇ ಮಹಾವಿದ್ಯಾಲಯದ ಪ್ರಾಚಾರ್ಯ ವಿನಾಯಕ ಹೆಗಡೆ, ವಕ್ತಾರರಾಗಿ ಪಾಲ್ಗೊಂಡಿದ್ದರು.ಕೆ.ಎಲ್.ಇ ಪದವಿ ಕಾಲೇಜಿನ ಪ್ರಾಚಾರ್ಯೆ ನಾಗಮ್ಮ ಎಮ್, ಯುವಮೋರ್ಚಾದ ಕಾರ್ಯದರ್ಶಿಗಳಾದ ನಾಗರಾಜ್ ಖಾರ್ವಿ, ಪ್ರಧಾನ ಕಾರ್ಯದರ್ಶಿ ನೀಲೇಶ ನಾಯ್ಕ, ಅನಿಲ ಮಹಾಲೆ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE
