ಸಿದ್ದಾಪುರ :ತಾಲೂಕಿನ ಕೊಂಡ್ಲಿಯ ವಿಶ್ವಕರ್ಮ ಸಮುದಾಯ ಭವನದಲ್ಲಿ ಉಕ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ವತಿಯಿಂದ ಎರಡನೇ ವರ್ಷದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಗೋಕಣದ ಶ್ರೀ ಕಾಳಿಕಾಂಬಾ ಕಮಟೇಶ್ವರ ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಉಮೇಶ ಆಚಾರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಿಂದುಳಿದಿರುವ ನಮ್ಮ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳು, ಶೈಕ್ಷಣಿಕ ಪ್ರಗತಿ ಸಾಧಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.ವಿಶ್ವಕರ್ಮ ಒಕ್ಕೂಟದ ಉಪಾಧ್ಯಕ್ಷ ಗಣೇಶ ಆಚಾರ್ಯ ಹಂಸಳ್ಳಿ ಅಧ್ಯಕ್ಷತೆ ವಹಿಸಿದ್ದರು.ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಗೋಪಾಲಾಚಾರ್ಯ, ಸಿದ್ದಾಪುರದ ವಿಶ್ವಕರ್ಮ ಸೇವಾ ಸಂಘದ ತಾಲೂಕಾಧ್ಯಕ್ಷ ರಾಮಾಚಾರ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸಾಧನೆಗೈದಧನ್ಯ ಸರ್ವೇಶ್ವರ ಆಚಾರ್ಯ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಎಸ್‍ಎಲ್‍ಎಲ್‍ಸಿ ಯಲ್ಲಿಅಭ್ಯಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಡೈಜೆಸ್ಟ್‍ನ್ನು ವಿತರಿಸಲಾಯಿತು.
ವಿಶ್ವಕರ್ಮ ಒಕ್ಕೂಟದ ಸದಸ್ಯರುಗಳಾದ ವಿನೋದ ಆಚಾರ್ಯ ಮಾವಿನಕಟ್ಟೆ, ಮಹೇಶ ಆಚಾರ್ಯ ಉಪಸ್ಥಿತರಿದ್ದ್ಟರು. ವಿಶ್ವಕರ್ಮ ಸಮಾಜದ ಅಂಕೋಲಾ ಘಟಕದ ತಾಲೂಕಾಧ್ಯಕ್ಷ ರವೀಂದ್ರ ಆಚಾರ್ಯ.ಕಣಗಿಲ ಸ್ವಾಗತಿಸಿದರು.ಕಾರ್ಯದರ್ಶಿ ಪ್ರಕಾಶ ಆಚಾರ್ಯ ನಿರೂಪಿಸಿದರು.ಒಕ್ಕೂಟದ ಖಜಾಂಜಿ ಪ್ರಕಾಶ ಆಚಾರ್ಯ ಕರ್ಕಿ ವಂದಿಸಿದರು