ಅಂಕೋಲಾ: ಕುಮಟಾ ಪಟ್ಟಣದಡಾ. ಎ. ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬುಧವಾರ “ಸಮಾನ ನಾಗರಿಕ ಸಂಹಿತೆ ಮಾತ್ರದೇಶದಲ್ಲಿ ಕೋಮು ಸೌಹಾರ್ದತೆಯನ್ನುಕಾಪಾಡುತ್ತದೆ”.ಎಂಬ ವಿಷಯದ ಕುರಿತು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಡಾ|| ಮಾಸೂರಕರ್ ಪರ್ಯಾಯ ಫಲಕ ಚರ್ಚಾ ಸ್ಫರ್ಧೆಯಲ್ಲಿ ಸ್ಥಳೀಯ ಜಿ.ಸಿ.ಕಾಲೇಜಿನ ವಿದ್ಯಾರ್ಥಿನಿಯರಾದ ಅಪೂರ್ವಾ ಆರ್.ನಾಯಕ, ಪ್ರಥಮ ಹಾಗೂ ನಿಶ್ಚಿತಾ ಆರ್.ನಾಯಕ, ತೃತೀಯ ಬಹುಮಾನಗಳಿಸಿ ಪರ್ಯಾಯ ಫಲಕವನ್ನು ಪಡೆದುಕೊಂಡಿದ್ದಾರೆ.
ವಿಜೇತರನ್ನುಜಿ.ಸಿ.ಕಾಲೇಜಿನ ಪ್ರಾಚಾರ್ಯಡಾ. ಅಶೋಕ ಕುಮಾರ ಎ., ಡಿಬೆಟ್ ಮತ್ತು ಕ್ವಿಜ್‍ಕಮಿಟಿ ಚೇರಮನ ಡಾ.ಎಸ್. ವಿ. ವಸ್ತ್ರದ, ವಿದ್ಯಾರ್ಥಿ ಕ್ಷೇಮಾಧಿಕಾರಿ ಎಂ.ಎಂ.ಪಾಟೀಲ್, ಪ್ರಾಧ್ಯಾಪಕರಾದ ವಿ.ಎಂ.ನಾಯ್ಕ, ಜೆ.ಎಸ್.ಫರ್ನಾಂಡೀಸ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE