ಅಂಕೋಲಾ : ಸೈನ್ಯ – ಸೈನಿಕರು ಮತ್ತು ದೇಶದ ಬಗ್ಗೆ ಚಿಕ್ಕಮಕ್ಕಳಲ್ಲಿ ಅಭಿಮಾನ ಮೂಡಲಿ ಎಂಬ ಸದುದ್ದೇಶದಿಂದ ಶಾಂತಿನಿಕೇತನ ಸಂಸ್ಥೆಯ ವತಿಯಿಂದ ಕರ‍್ಗಿಲ್ ಯುದ್ಧದ ವಿಜಯೋತ್ಸವದ ದಿನಾಚರಣೆಯನ್ನು ರ‍್ಥಪರ‍್ಣವಾಗಿ ಆಚರಿಸಲಾಯಿತು.

ಕರ‍್ಯಕ್ರಮದ ಪ್ರಯುಕ್ತ ಪ್ರಯುಕ್ತ ಅಂಕೊಲಾದ ಶಾಂತಿನಿಕೇತನ ಪರ‍್ವ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಸೈನಿಕರಿಗೆ ಸನ್ಮಾನ ಕರ‍್ಯಕ್ರಮ ಆಯೋಜಿಸಲಾಗಿತ್ತು.

ನಿವೃತ್ತ ಸೈನಿಕರಾದ ಅನಂದು ಗಾಂವಕರ , ಅಲಗೇರಿ ಮತ್ತು ಬಾಬು ಮಹದೇವ್ ಕೇಣೀಕರ, ಕೇಣಿ ಅವರನ್ನು ಶಾಂತಿನಿಕೇತನ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ದೇಶಸೇವೆ ಅಂದ್ರೆ ಕೇವಲ ಬಂದೂಕನ್ನು ಹಿಡಿದು ಯುದ್ಧಭೂಮಿಯಲ್ಲಿ ಯುದ್ದ ಮಾಡುವುದಲ್ಲ. ದೇಶದ ಪ್ರತಿಯೊಬ್ಬ ಪ್ರಜೆ ಪ್ರಾಮಾಣಿಕವಾಗಿ ತಮ್ಮ ವೃತ್ತಿ ಸೇವೆ ಮಾಡಿದರೂ ಸಹ ದೇಶಸೇವೆ ಮಾಡಿದ ಹಾಗೆ , ಸೈನ್ಯಕ್ಕೆ ಸೇರಬೇಕು ಎಂದರೆ ನಮ್ಮ ಯೌವನವನ್ನು ದೇಶಕ್ಕೆ ರ‍್ಪಿಸಿದ ಹಾಗೆ ಎಂದು ನಿವೃತ್ತ ಯೋಧ ಆನಂದ ಗಾಂವಕರ ಹೇಳಿದರು .

ಸೈನಿಕನಾಗಿ ದೇಶಸೇವೆ ಮಾಡುವ ಭಾಗ್ಯ ಎಲ್ಲರಿಗೂ ಲಭ್ಯವಾಗುವುದಿಲ್ಲ , ತಾನೊಬ್ಬ ನಿವೃತ್ತ ಸೈನಿಕ ಎಂಬುದು ಹೆಮ್ಮೆ ಎಂದು ಬಾಬು ಕೇಣೀಕರ ಅಭಿಪ್ರಾಯ ಪಟ್ಟರು.

ಶಾಂತಿನಿಕೇತನ ಟ್ರಸ್ಟ್ ಅಧ್ಯಕ್ಷ ತಿಮ್ಮಣ್ಣ ಬಿ.ನಾಯಕ ಮಾತನಾಡಿ ದೇಶದ ಭದ್ರತೆಗೆ ನಾಗರಿಕರ ಪಾತ್ರ ಅತಿಮುಖ್ಯ ಎಂದರು.

ಟ್ರಸ್ಟ್ ಕರ‍್ಯರ‍್ಶಿ ಶಾಂತಿ ಟಿ ನಾಯಕ ಮಾತನಾಡಿ ದೇಶದ ಗಡಿ ಕಾಯುವ ಸೈನಿಕರಿಗೆ ನಮ್ಮೆಲ್ಲರ ಆಸ್ತಿ ಬರೆದುಕೊಟ್ಟರೂ ಸಹ ಕಡಿಮೆ ಆಗುತ್ತೆ, ಅಷ್ಟು ಕಷ್ಟ ಪಟ್ಟು ಸೈನಿಕರು ದೇಶದ ರಕ್ಷಣೆ ಮಾಡುತ್ತಾರೆ ಅಂತಾ ತಮ್ಮ ಕಾಶ್ಮೀರ ಯಾತ್ರೆಯ ಅನುಭವದ ಮೂಲಕ ಹೇಳಿದರು.

ಶಾಂತಿನಿಕೇತನ ಸಂಸ್ಥೆಯ ಮುಖ್ಯಸ್ಥರು ಹಾಗೂ ದಂತವೈದ್ಯರು ಆದ ಡಾ. ಸಂಜು ನಾಯಕ ಉಪಸ್ಥಿತರಿದ್ದರು.

ಶಿಕ್ಷಕಿ ಸಹನಾ ನಾಯಕ ನಿರೂಪಿಸಿದರು.ಶಿಕ್ಷಕಿ ಶೀತಲ್ ನಾಯ್ಕ ಸ್ವಾಗತಿಸಿದರು, ಶಿಕ್ಷಕಿ ಮಮತಾ ನಾಯ್ಕ್ ಅತಿಥಿ ಪರಿಚಯಿಸಿದರು. ಶಿಕ್ಷಕಿ ಶೃದ್ಧಾ ಆಚರ‍್ಯ ವಂದಿಸಿದರು.

ಕಾರವಾರ ಟೈಮ್ಸ್ ನ್ಯೂಸ್  updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/HyQE3CIKWEICSXQCoirwQE