ಅಂಕೋಲಾ : ನಗರದ ಲಯನ್ಸ್ ಇಂಟರ್‍ನ್ಯಾಷನಲ್ (ಅಂಕೋಲಾ ಸಿಟಿಯ) 2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಯಶ್ರೀ ಪಿ. ಶೆಟ್ಟಿ ಆಯ್ಕೆಯಾಗಿದ್ದಾರೆ.
ನೂತನ ಕಾರ್ಯದರ್ಶಿಯಾಗಿ ನಯನಾ ಶೇಟ್, ಕೋಶಾಧ್ಯಕ್ಷರಾಗಿ ನೀತಾ ಮಹಾಲೆಯವರು ಅವಿರೋಧವಾಗಿ ಆಯ್ಕೆಗೊಂಡು ಪ್ರಸಕ್ತ ಸಾಲಿನ ಲಯನ್ಸ್ ಚಟುವಟಿಕೆಗಳ ಕಾರ್ಯಭಾರವನ್ನು ನಿರ್ವಹಿಸಲಿದ್ದಾರೆ.


ಉಪಾಧ್ಯಕ್ಷರುಗಳಾಗಿ ನಾಗರಾಜ ಮಹಾಲೆ, ಅರುಣ ಶೇಟ್, ಎಲ್.ಸಿ.ಐ.ಎಫ್ ಕೊರ್ಡಿನೇಟರ್‍ರಾಗಿ ಸುರೇಶ ಡಿ. ನಾಯ್ಕ, ಜಂಟಿ ಕಾರ್ಯದರ್ಶಿಯಾಗಿ ಡಾ. ವಿಜಯದೀಪ್, ಜಂಟಿ ಕೋಶಾಧ್ಯಕ್ಷರಾಗಿ ಅಶ್ವಿನಿ ಸಾಮಂತ, ಮೆಂಬರ್‍ಶಿಪ್ ಚೇರಪರ್ಸನ್‍ರಾಗಿ ನಾರಾಯಣ ಎಚ್. ನಾಯ್ಕ, ಕ್ಲಬ್ ಸರ್ವಿಸ್ ಚೇರಪರ್ಸನ್‍ರಾಗಿ ಕಮಲಾಕರ ಬೋರಕರ, ಲಾಯನ್ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಶನ್ ಚೇರಪರ್ಸನ್‍ರಾಗಿ ಗಣಪತಿ ಎಂ. ಹೆಗಡೆ, ಕ್ಲಬ್ ಆಡಳಿತಾಧಿಕಾರಿಯಾಗಿ ಶಶಿಧರ ಎನ್. ಶೇಣ್ವಿ, ಕ್ಲಬ್ ಪ್ಲಾನಿಂಗ್ ಮತ್ತು ಹಾಸ್ಪಿಟಾಲಿಟಿ ಅಧಿಕಾರಿಯಾಗಿ ಶಾಂತಾರಾಮ ಶಿರೋಡ್ಕರ ಆಯ್ಕೆಗೊಂಡರು.


ನಿರ್ದೇಶಕರಾಗಿ ನಾರಾಯಣ ಎ. ನಾಯ್ಕ, ಮೋಹನ ಎಸ್. ಶೆಟ್ಟಿ, ಬೀರಾ ಇ, ಬೋರಕರ, ಬಿ.ಆರ್. ರಾಜು, ಉದಯಾನಂದ ನೇರಲಕಟ್ಟೆ, ಪ್ರಶಾಂತ ಶೆಟ್ಟಿ, ಸುಬ್ರಹ್ಮಣ್ಯ ರೇವಣಕರ, ಟೇಲ್ ಟ್ವಿಸ್ಟರ್ ಪ್ರದೀಪ ರಾಯ್ಕರ, ಕೃಷ್ಣಾನಂದ ವ್ಹಿ. ಶೆಟ್ಟಿ ಆಯ್ಕೆಗೊಂಡರು.
ನೂತನ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆಯನ್ನು ಲಯನ್ಸ್ ಕ್ಲಬ್ ಹಿರಿಯ ಸದಸ್ಯರಾದ ಎಂ.ಜೆ.ಎಫ್ ಶಶಿಧರ ಶೇಣ್ವಿ, ನಾರಾಯಣ ಎ. ನಾಯ್ಕ, ಬೀರಾ ಬೋರಕರ, ಕಮಲಾಕರ ಬೋರಕರ, ಅಧ್ಯಕ್ಷ ಸುರೇಶ ನಾಯ್ಕ, ನಾರಾಯಣ ಎಚ್. ನಾಯ್ಕ, ಮೋಹನ ಶೆಟ್ಟಿ, ಗಣಪತಿ ಎಂ. ಹೆಗಡೆ, ಡಾ. ವಿಜಯದೀಪ, ಡಾ. ಶಾಂತಾರಾಮ ಶಿರೋಡ್ಕರ ನಡೆಸಿಕೊಟ್ಟರು.


ನೂತನ ಸದಸ್ಯರ ಪ್ರತಿಜ್ಞಾವಿಧಿ ಮತ್ತು ಅಧಿಕಾರ ಹಸ್ತಾಂತರವನ್ನು ಲಯನ್ಸ್ ಇಂಟರ್‍ನ್ಯಾಷನಲ್ ಗವರ್ನರ್ ಎ.ಜೆ.ಎಫ್. ಸುಗ್ಗಲಾ ಯಲಮಳಿ ಅವರು ಜುಲೈ 31 ರ ಭಾನುವಾರದಂದು ನಾಡವರ ಸಮುದಾಯ ಭವನದಲ್ಲಿ ನೆಡಯಲಿದೆ.

ಕಾರವಾರ ಟೈಮ್ಸ್ ನ್ಯೂಸ್  updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/HyQE3CIKWEICSXQCoirwQE