ಶಿರಸಿ : ಮಳೆಯಿಂದಾಗಿ ಇಲ್ಲಿಯ ಹುಬ್ಬಳ್ಳಿ ರಸ್ತೆಯಲ್ಲಿರುವ ಗೌಳಿ ಓಣಿಯು ನಡುಗಡ್ಡೆಯಂತಾಗಿದ್ದು ದೋಣಿ ಹಾಕುವ ಪರಿಸ್ಥಿತಿಗೆ ಬಂದಿದೆ.
ಅಸಮರ್ಪಕವಾದ ಗಟಾರದಿಂದಾಗಿ ನೀರು ಮುಂದೆ ಹರಿಯಲಾಗದೇ ಅಲ್ಲಿರುವ ಮನೆ ಅಂಗಡಿ ಒಳಗೆಲ್ಲಾ ನುಗ್ಗಿದ್ದರಿಂದ ಮನೆ ಅಂಗಡಿಗಳೆಲ್ಲಾ ಜಲಾವೃತವಾಗಿದೆ.
ನೆಲದ ಮೇಲಿದ್ದ ದಿನಬಳಕೆ ವಸ್ತು,ಬಟ್ಟೆ ಪಾತ್ರೆಗಳೆಲ್ಲಾ ಕೆಲವು ಗಂಟೆಗಳ ಕಾಲ ಕ್ಷಣಮಾತ್ರದಲ್ಲಿ ಮಂಚ ಎರಿ ಬಿಟ್ಟವು.ಈ ಭಾಗದಲ್ಲಿ ದೊಡ್ಡ ಮಳೆ ಬಂತೆಂದರೆ ಇಲ್ಲಿನ ನಿವಾಸಿಗಳು ಮನೆಯ ಒಳಗೆ ಹೋಗಲು ಹೆದರುತ್ತಾರೆ. ಮನೆಯ ಒಳಗೆ ಹರಿದು ಬರುವ ಮಳೆಯ ನೀರಿನ ಜೊತೆಗೆ ವಿಷ ಪೂರಿತ ಹಾವುಗಳು ಬರುವ ಸಾದ್ಯತೆಯಿರುವುದರಿಂದ ಮನೆಗೆ ಬೀಗ ಹಾಕಿ ಬಿಡುತ್ತಾರೆ.ಇಲ್ಲಿನ ನಿವಾಸಿಗರು ತಲೆದೂರಿರುವ ಸಮಸ್ಯೆಯ ಬಗ್ಗೆ ನಗರಸಭೆಯ ಗಮನಕ್ಕೆ ತಂದು ಬಹಳಷ್ಟು ವರ್ಷವಾದರೂ ಯಾರೂ ಕೂಡಾ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಲಾಗುತ್ರಿದೆ.
ಇದೇ ಮಳೆಗಾಲದಲ್ಲಿ ನಮಗೆ ಇಲ್ಕಿಯ ಗಟಾರದ ಸಮಸ್ಯೆ ಬಗೆ ಹರಿಸಿಕೊಡಬೇಕು.ಇಲ್ಲವಾದರೆ ಮುಂಬರುವ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಲಾಗುವುದು ಎಂದು ನಾಗರಿಕರು ನಗರಸಭೆಗೆ ಎಚ್ಚರಿಕೆ ನೀಡಿದ್ದಾರೆ
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
