ಶಿರಸಿ : ಕಲಿಕೆಯಲ್ಲಿ ಹಿಂದಿರುವ ಮಕ್ಕಳಿಗೆ ಜಾನಪದ ಕಲೆಯಾದ ಸೂತ್ರದ ಗೊಂಬೆಯ ಮೂಲಕ ಆಸಕ್ತಿದಾಯಕ ಕಲಿಕೆಯನ್ನು ಮೈಗೂಡಿಸುವ ನಿಟ್ಟಿನಲ್ಕಿ ಶ್ರಾವಣಮಾಸದ ಪ್ರಯುಕ್ತ ಮಾರಿಗುಡಿ ಸಭಾಭವನದಲ್ಲಿ ಅ.6 ರಂದು ಸಂಜೆ 6 ಗಂಟೆಯಿಂದ 8 ಗಂಟೆಯವರಗೆ ಸೂತ್ರ ಗೊಂಬೆಯಾದ ಪ್ರದರ್ಶನವನ್ನು ಎರ್ಪಡಿಸಲಾಗಿದೆ ಎಂದು ವದ್ದಲ ಶಾಲೆಯ ಮುಖ್ಯ ಶಿಕ್ಷಕರು ಹಾಗು ಕಲಾವಿದರೂ ಆಗಿರುವ ಮನೋಜ ಪಾಲೇಕರ್ ತಿಳಿಸಿದರು.
ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸೂತ್ತದ ಗೊಂಬೆಯಾಟಗಳು ಕರ್ನಾಟಕ ಬಹುತೇಕ ಭಾಗಗಳಲ್ಕಿ ಕಾಣಸಿಗುತ್ತಿದ್ದರೂ ನಮ್ಮ ಜಿಲ್ಕೆಯಲ್ಲಿ ಕಂಡು ಬರುವದಿಲ್ಲ.ಆದ್ದರಿಂದ ಈ ಕಲೆಯಲ್ಲಿ ರಾಷ್ಟ್ರ ಮಟ್ಟದ ಖ್ಯಾತಿಗಳಿಸಿರುವ ಸಿದ್ದಪ್ಪ ಬಿರದಾರವರ ಸಹಯೋಗದಲ್ಕಿ ಸೂತ್ರಬೊಂಬೆಯಾಟದ ಪ್ರದರ್ಶನವನ್ನು ನುರಿತ ಕಲಾವಿದ ಮಂಜು ಗುಡಿಗಾರ,ನಮ್ಮ ಕುಟುಂಬ ಹಾಗು ಕೆಲವೊಂದು ಶಿಕ್ಷಕರ 1.5 ಲಕ್ಷ ರೂ ವೆಚ್ಚದಲ್ಲಿ ಸೂತ್ರ ಬೊಂಬೆಯಾಟ ಪ್ರದರ್ಶನಮಾಡುತ್ತಿರುವದಾಗಿ ತಿಳಿಸಿದರು.
ಸೂತ್ರ ಬೊಂಬೆಯಾಟವನ್ನು ಶಿಕ್ಷಣ ರಂಗ ಕಲೆಯಾಗಿ 2005 ರಲ್ಕಿ ಬೆಂಗಳೂರಿನಲ್ಲಿ ತರಬೇತಿ ಪಡೆಯಲಾಗಿತ್ತು.ಆಗ ಪಾಠವನ್ನು ನಾಟಕ ರೂಪದಲ್ಲಿ ತರಲು 10 ಗೊಂಬೆಗಳನ್ನು ಬಳಸಲಾಗುತ್ತಿತ್ತು.ಅದರಲ್ಲಿ ನಾವು 9 ಗೊಂಬೆಗಳನ್ನು ಶಾಲೆಗಳಲ್ಲಿ ಕಲಿಕೆಗಾಗಿ ಅಳವಡಿಸಿಕೊಂಡಿದ್ದೇವೆ.ಈಗ 1೦ ನೇ ಸೂತ್ರ ಗೊಂಬೆಯ ಪ್ರದರ್ಶನ ನಡೆಸಲಾಗುತಿದ್ದು ಮುಂದೆ ಇದನ್ನು ಶಾಲೆಗಳಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಮಾಡುವದಾಗಿ ತಿಳಿಸಿದರು.
ಶಿಕ್ಷಕ ಪ್ರಕಾಶ ರಾಥೋಡ ಮಾತನಾಡಿ ಮಕ್ಕಳಲ್ಲಿ ಮೌಖಿಕವಾಗಿ ಮಾತಿನ ಮೂಲಕ ಕಲೆಯ ಹೊರ ಹಾಕುವುದು ತುಂಬಾ ಕಷ್ಠದ ಕೆಲಸವಾಗಿದೆ.ಮಕ್ಕಳು ಕಲಿಕೆಯಲ್ಲಿ ಸ್ವತ: ನೋಡಿ ತನ್ನಳೊಗೆ ಅನುಭವಿಸಿದಾಗ ಮಾತ್ರ ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದ ನಾವು ಕಲಿಕೆಯನ್ನು ಸಲುಭವಾಗಿಸಬಲ್ಲ ಸೂತ್ತಗೊಂಬೆಯಾಟಕ್ಕೆ ಹೆಚ್ಚಿನ ಒತ್ತು ನೀಡ ಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಲಾಭಾರತಿ ಸಂಘಟನೆಯ ಅರ್ಜುನ ಮುರುಡೇಶ್ವರ ಇದ್ದರು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/GhPLlofxjaR1GYrAz8Rpi7
