ಶಿರಸಿ : ಹಿಂದೂಗಳ ವರ್ಷದ ಪ್ರಥಮ ಪವಿತ್ರ ಹಬ್ಬವಾದ ನಾಗರ ಪಂಚಮಿ ಹಬ್ಬವನ್ನು ಶಿರಸಿಯಾದ್ಯಾಂತ ಭಕ್ತಿ ಭಾವ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಇಲ್ಲಿಯ ಇತಿಹಾಸ ಪ್ರಸಿದ್ದ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿರುವ ನಾಗರ ಕಟ್ಟಗೆ ಹಾಲೆರೆಯಲು ಭಕ್ತರ ದಂಡೆ ಹರಿದು ಬಂದಿತ್ತು.

ದೇವಸ್ಥಾನದಿಂದ ಆರಂಭವಾದ ಸರತಿ ಸಾಲು ಕುಮಟಾ ಮುಖ್ಯ ರಸ್ತೆಯಲ್ಲಿರುವ ಪೆಟ್ರೋಲ್ ಪಂಪವರೆಗೂ ಹೋಗಿತ್ತು.

ಮದ್ಯಾಹ್ನವಾದಂತೆ ಕ್ರಮೇಣವಾಗಿ ಭಕ್ತರ ಸಾಲು ಇಳಿಮುಖಗೊಂಡಿತು.ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪಕ್ಕದಲ್ಕಿರುವ ನಾಗರಕಟ್ಟೆಗೆ ಭಕ್ತರು ಹಾಲೆರೆಯಲು ಅವಕಾಶ ಮಾಡಿಕೊಡಲಾಗಿತ್ತು.

ಭಕ್ತರು ಮೊದಲು ನಾಗರಕಟ್ಟೆಗೆ ಹಾಲೆರೆದ ಬಳಿಕ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಹಣ್ಣು ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ಇದೇ ರೀತಿಯಾಗಿ ನಗರದ ಪ್ರಮುಖ ದೇವಸ್ಥಾನಗಳಲ್ಕಿರುವ ನಾಗರ ಕಟ್ಟೆಯಲ್ಕೂ ಭಕ್ತರು ಬೆಳಿಗ್ಗೆ ಆರು ಗಂಟೆಯಿಂದಲೇ ಕುಟುಂಬ ಸಮೇತರಾಗಿ ತೆರಳಿ ಹಾಲು ಎರೆಯುತ್ತಿದ್ದ ಸನ್ನಿವೇಶ ಕಂಡು ಬಂತು

ಶಿರಸಿ ತಾಲೂಕಿನ  ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/GhPLlofxjaR1GYrAz8Rpi7