ಜೋಯಿಡಾ: ತಾಲೂಕಿನ ಅನಮೋಡ ಚೆಕ್ ಪೋಸ್ಟ ಬಳಿ ಖಚಿತ ಮಾಹಿತಿ ಆಧಾರದ ಮೇಲೆ ಇಂದು ಮದ್ಯಾಹ್ನ ೧೨.೩೦ ಗಂಟೆಗೆ ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ವಾಹನ ಮತ್ತು ಸರಾಯಿಯನ್ನು ಅನಮೋಡ ಅಬಕಾರಿ ಪೋಲಿಸರು ವಶಪಡಿಸಿಕೊಂಡ ಘಟನೆ ನಡೆದಿದೆ.


ಆಂಧ್ರಪ್ರದೇಶ ಮೂಲದ ಸುದಾ‌ನರೇಶ ವೆಂಕಟಸುಬ್ಬಯ್ಯ ಎಂಬುವವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ವಾಹನ ಸಂಖ್ಯೆ ಂP೨೧Aಕಿ ೮೮೧೬ ರಲ್ಲಿ ೬೩ ಲೀ ವಿವಿಧ ರೀತಿಯ ಮದ್ಯ ಹಾಗೂ ವಾಹನ ಸೇರಿ ಒಟ್ಟು‌ ಮೌಲ್ಯ ೩೦೭೦೪೦ರೂ ಗಳಾಗಿದೆ‌.
ಈ ಕರ‍್ಯಾಚರಣೆ ಉತ್ತರಕನ್ನಡ ಜಿಲ್ಲೆ ಅಬಕಾರಿ ಉಪ ಆಯುಕ್ತರು ವನಜಾಕ್ಷಿ ಎಂ ಹಾಗೂ ಅಬಕಾರಿ ಉಪ ಅಧಿಕ್ಷಕರು ಯಲ್ಲಾಪುರ ಶಂಕರಗೌಡ ಪಾಟೀಲ್ ಅವರ ಮರ‍್ಗರ‍್ಶನದಲ್ಲಿ ಅನಮೋಡ ಅಬಕಾರಿ ಪಿ.ಎಸ್.ಐ ಶ್ರೀಕಾಂತ್ ಅಸೋದೆ, ಸಿಬ್ಬಂದಿಗಳಾದ ರಾಜು ಭಟ್ಕಲ್, ಯು,ಎನ್ ತುಳಜಿ, ಉಪಸ್ಥಿತರಿದ್ದರು

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/FwQPbtH4lkpE71sGaWxRXj