ಜೋಯಿಡಾ – ತಾಲೂಕಿನ ಪ್ರಮುಖ ರಾಜ್ಯ ಹೆದ್ದಾರಿ ಅಣಶಿ ಘಟ್ಟ ರಸ್ತೆ ಬಂದ್ ಮಾಡಬೇಕೆಂಬ ಉದ್ದೇಶ ಜಿಲ್ಲಾಡಳಿತಕ್ಕೆ ಇಲ್ಲ. ಭಾರಿ ವಾಹನ ಅಣಶಿ ರಸ್ತೆ ಮುಖಾಂತರ ಮಳೆಗಾಲದಲ್ಲಿ ಸಂಚರಿಸಿದರೆ ವೈಬ್ರೇಟ ಆಗಿ ಮಣ್ಣು ಕುಸಿಯುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕ ಭಾರಿ ವಾಹನ ಸಂಚಾರ ನಿಷೇಧ ಮಾಡಲಾಗಿದೆ. ಒಂದೆರಡು ವಾರದಲ್ಲಿ ಯಥಾಸ್ತಿತಿ ಸಂಚಾರ ಪ್ರಾರಂಭವಾಗಲಿದೆ ಎಂದು ಸಹಾಯಕ ಕಮಿಷನರ ಜಯಲಕ್ಷ್ಮಿ ಹೇಳಿದರು.

ಅವರು ಗುರುವಾರ ಜೋಯಿಡಾ ತಹಶೀಲದಾರ ಕಛೇರಿಯಗೆ ಆಗಮಿಸಿದ ಸಂರ‍್ಭದಲ್ಲಿ ಸ್ಥಳೀಯ ಮುಖಂಡರು ಅಣಶಿ ರಾಜ್ಯ ಹೆದ್ದಾರಿ ಮೂಲಕ ಬಸ್ ಸಂಚಾರ ಪ್ರಾರಂಭಿಸಬೇಕೆಂದು ಕೇಳಿದಾಗ ಮಾತನಾಡಿದ ಅವರು ಈಗ ಮಳೆಯಿರುವುದರಿಂದ ಈ ಮರ‍್ಗದ ಮೂಲಕ ಸಂಚಾರ ಅಪಾಯವಿದೆ. ಮಳೆ ಎಲ್ಲಿ ಹೆಚ್ಚು, ಕಡಿಮೆ ಬಿಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈಗ ಬಸ್ ಪ್ರಾರಂಭಿಸಿದರೆ ಟ್ರಕನವರು ಕೇಳುತ್ತಾರೆ. ಇನ್ನೂ ಎರಡು ವಾರದಲ್ಲಿ ಮಳೆ ಕಡಿಮೆಯಾಗಲಿದೆ ಆಗ ಎಂದಿನಂತೆ ಬಸ್ ಸಂಚಾರ ಪ್ರಾರಂಭಿಸಲಾಗುವುದು. ಕದ್ರಾ, ಮಲ್ಲಾಪುರ, ಕೈಗಾ ಈ ಪ್ರದೇಶದಲ್ಲಿ ಕೂಲಿ ಕೆಲಸಕ್ಕೆ ಹೋಗುವ ಜನರಿದ್ದಾರೆ. ಜೋಯಿಡಾ, ದಾಂಡೇಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯರ‍್ಥಿಗಳು ಶಾಲಾ ಕಾಲೇಜ ಹೋಗುತ್ತಿರುವ ವಿಷಯ ಗಮನಕ್ಕೆ ಇದೆ.ಕಾರವಾರ ಹಾಗೂ ದಾಂಡೇಲಿ ಘಟಕದೊಂದಿಗೆ ಮಾತನಾಡಿ ವಿದ್ಯರ‍್ಥಿಗಳಿಗೆ, ಸರ‍್ವಜನಿಕರಿಗೆ ಅನುಕೂಲವಾಗಲೆಂದು ಹೆಚ್ಚುವರಿ ಮಿನಿ ಬಸ್ ಅಗತ್ಯ ವೇಳೆಯಲ್ಲಿ ಬಿಡುವಂತೆ ಕ್ರಮ ಜರುಗಿಸುತ್ತೇವೆ ಎಂದರು.

ವೋಟರ್ ಐಡಿಗೆ ಆಧಾರ ಜೋಡಿಸಿ.
ವೋಟರ ಐಡಿ ಯೊಂದಿಗೆ ಆಧಾರ ಜೋಡಣೆ ಕುರಿತು ಸರ‍್ವಜನಿಕರೊಂದಿಗೆ ಮಾತನಾಡಿದ ಅವರು ಸ್ಥಳೀಯ ಮತಗಟ್ಟೆ ಅಧಿಕಾರಿ (ಬಿ.ಎಲ್.ಓ) ಅಥವಾ ವೋಟರ್ ಹೆಲ್ಪಲೈನ ಆಪ್ ಮೂಲಕ ಓಚಿಣioಟಿಚಿಟ ಗಿoಣeಡಿ seಡಿviಛಿe ಠಿoಡಿಣeಟ (ಓಗಿSP) ಮೂಲಕ ಸ್ವಂತ ಮಾಡಬಹುದು. ಮೂಲ ದಾಖಲೆ ಯಾರು ಕೊಡಬಾರದು. ಬ್ಯಾಂಕ ಎ
ಅಕೌಂಟಗಳು ಹ್ಯಾಕ ಆಗುವ ಸಾಧ್ಯತೆ ಇದೆ. ಸಂರ‍್ಕ ಇಲ್ಲದ ಪ್ರದೇಶದಲ್ಲಿ ಬಿ.ಎಲ್.ಓ ಅಧಿಕಾರಿ ಸ್ಥಳಕ್ಕೆ ಹೋಗಿ ಕೆಲಸ ಮಾಡಲಿದ್ದಾರೆ ಎಂದು ಎ.ಸಿ. ಜಯಲಕ್ಷ್ಮಿ ಹೇಳಿದರು.

ಈ ಸಂರ‍್ಭದಲ್ಲಿ ಗ್ರಾಮ ಪಂಚಾಯತ ಸದಸ್ಯ ಸಂತೋಷ ಮಂಥೆರೋ, ಕ.ಸಾ.ಪ.ಅಧ್ಯಕ್ಷ ಪಾಂಡುರಂಗ ಪಟಗಾರ, ಪ್ರಮುಖರಾದ ಶ್ಯಾಮ ಪೋಕಳೆ, ಸುಭಾ ಮುಂತಾದವರು ಉಪಸ್ಥಿತರಿದ್ದರು

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/FwQPbtH4lkpE71sGaWxRXj