ಜೋಯಿಡಾ: ತಾಲೂಕಿನ ತಹಶಿಲ್ದಾರರ ಕಚೇರಿಯ ಸಭಾಂಗಣದಲ್ಲಿ ತಹಶಿಲ್ದಾರ ಸಂಜಯ ಕಾಂಬ್ಳೆ ಅಧ್ಯಕ್ಷತೆಯಲ್ಲಿ 75 ನೇ ಸ್ವಾತಂತ್ರೋತ್ಸವ ಆಚರಣೆ ಪೂರ್ವಭಾವಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ತಹಶಿಲ್ದಾರ ಸಂಜಯ ಕಾಂಬಳೆ ಮಾತನಾಡಿ ಭಾರತ ದೇಶ ಸ್ವಾತಂತ್ರವಾಗಿ ನಾವು ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಈ ವರ್ಷದ ಸ್ವಾತಂತ್ರ ದಿನಾಚಾರಣೆ ಅರ್ಥಪೂರ್ಣವಾಗಿ ನಾವು ಆಚರಿಸಬೇಕು. ಕಡ್ಡಾಯವಾಗಿ ಎಲ್ಲಾ ಸರಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಹಾರಬೇಕು. ಮನೆಯಲ್ಲಿಯೂ ಕೂಡ ಧ್ವಜ ಹಾರಬೇಕು. ಈಗಾಗಲೇ ಗ್ರಾಮ ಪಂಚಾಯತ್ ಮೂಲಕ ಧ್ವಜ ವಿತರಿಸುತ್ತೇವೆ. ಸರಕಾರದ ನಿಯಮದಂತೆ ಧ್ವಜ ಖರೀದಿಸಿ ಹಾರಾಟ ಮಾಡಬೇಕು. ಈ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು.

ಪ್ರತಿ ವರ್ಷದಂತೆ ಎಲ್ಲಾ ಕಾರ್ಯಕ್ರಮ ಆಯೋಜಿಸಲು ಸಭೆ ತಿರ್ಮಾನ ಮಾಡಿತು.
ಈ ಸಂದರ್ಭದಲ್ಲಿ ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ, ಕ.ಸಾ.ಪ.ಅಧ್ಯಕ್ಷ ಪಾಂಡುರಂಗ ಪಟಗಾರ, ಗ್ರಾ.ಪಂ.ಸದಸ್ಯ ಸಂತೋಷ ಮಂಥೆರೊ, ಪ್ರಮುಖರಾದ ಶ್ಯಾಮ ಪೊಕಳೆ, ಶಿಕ್ಷಣ ಇಲಾಖೆಯ ಮಹಾದೇವ ಹಳದಣಕರ, ಪಟಗಾರ, ಲೋಕೋಪಯೋಗಿ, ಜಿಲ್ಲಾ ಪಂಚಾಯತ, ಸಿ.ಡಿ.ಪಿ.ಓ, ಪೋಲಿಸ, ಅರಣ್ಯ, ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು
ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/FwQPbtH4lkpE71sGaWxRXj
