ಶಿರಸಿ: ಜಿಲ್ಲೆಯಲ್ಲಿ ಅತಿಕ್ರಮಣಕ್ಕೊಳಗಾಗಿರುವ ವಕ್ಫ್ ಬೋರ್ಡ್ ಆಸ್ತಿಯನ್ನು ಅವಧಿಯೊಳಗೆ ತೆರವುಗೊಳಿಸಿ ಸರಕಾರಕ್ಕೆ ಒಪ್ಪಿಸಲಾಗುವುದೆಂದು ವಕ್ಫ್ ಬೋರ್ಡ್ ಸಲಹಾ ಸಮಿತಿಯ ನೂತನ ಜಿಲ್ಲಾ ಅದ್ಯಕ್ಷ ಮಹ್ಮದ್ ಅನಿಸ್ ತಹಶಿಲ್ದಾರ ತಿಳಿಸಿದರು.ಅವರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತ ಜಿಲ್ಲೆಯಲ್ಲಿ ಸುಮಾರು ೧೫೦೦ ಕೋಟಿ ರೂ ಹೆಚ್ಚಿನ ಆಸ್ತಿಗಳಿದ್ದು ಕೆಲವರು ಆ ಆಸ್ತಿಯನ್ನು ಅತಿಕ್ರಮಣಮಾಡಿ ದುರುಪಯೋಗ ಪಡಿಸಿಕೊಂಡಿದ್ದು ಕೂಡಲೇ ವಶಕ್ಕೆ ಪಡೆದು ಸರಕಾರಕ್ಕೆ ಒಪ್ಪಿಸಲಾಗುವದೆಂದರು.
ಶಿರಸಿಯಲ್ಲಿ ಈ ಹಿಂದೆ ವಕ್ಫ್ ಬೋರ್ಡಿಗೆ ಸೇರಿದ ಜಾಗವನ್ನು, ಅಂಗಡಿಯನ್ನು ಆರ್ಥಿಕವಾಗಿ ಹಿಂದುಳಿದ ಬಡವರಿಗೆ ನೂರು ರೂಪಾಯಿ ಬಾಡಿಗೆಯಂತೆ ನೀಡಲಾಗಿತ್ತು. ಆದರೆ ಅದೇ ಬಡವರು ಅದೇ ಅಂಗಡಿ,ಜಾಗವನ್ನು ೧೦ ರಿಂದ ೨೦ ಸಾವಿರ ರೂ ಬಾಡಿಗೆಯನ್ನು ಬೇರೆಯವರಿಗೆ ನೀಡಿ ಕೇವಲ ನೂರು ರೂಪಾಯಿ ಬಾಡಿಗೆಯನ್ನು ಮಸೀದಿಗೆ ತುಂಬುತ್ತಿದ್ದಾರೆ.ಇದು ಕೂಡಾ ನಮ್ಮ ಗಮನದಲ್ಲಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಬಿಜೆಪಿ ಸರಕಾರ ಅಲ್ಪಸಂಖ್ಯಾತರನ್ನು ಯಾವತ್ತೂ ಕಡೆಗಣಿಸಿಲ್ಲ.ಬಿಜೆಪಿ ಸರಕಾರದಲ್ಲಿ ಮುಸ್ಲೀಮರ ಕಲ್ಯಾಣಕ್ಕಾಗಿ ಅತ್ಯಧಿಕವಾಗಿ ಹಣ ಬಿಡುಗಡೆಮಾಡಲಾಗಿದೆ.ಕಾಂಗ್ರೆಸ್ ನಮ್ಮವರನ್ನು ಮತ ಬ್ಯಾಂಕನ್ನಾಗಿ ಇಟ್ಟುಕೊಂಡಿದೆ ವಿನಹ ಅವರಿಂದ ಮುಸ್ಲೀಮರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿಲ್ಲವೆಂದರು.
ಸುದ್ದಿಗೋಷ್ಟಿಯಲ್ಕಿ ವಕ್ಫ್ ಬೋರ್ಡ್ ಸಲಹಾ ಸಮಿತಿಯ ಉಪಾದ್ಯಕ್ಷರುಗಳಾದ ಖಾಜಾ ವಾಲೆ,ಬಾಬಾ ಸಾಬ್ ಅಲನ್ ಸದಸ್ಯರುಗಳಾದ ಸಿಕಂದರ್ ಸಲಿಂ ಸುಂಠಿ,ಅಬ್ದುಲ್ ಮುಳುಗುಂದ್ ಉಪಸ್ಥಿತರಿದ್ದರು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/GhPLlofxjaR1GYrAz8Rpi7
