ಶಿರಸಿ: ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಅನುಸೂಚಿತ ಉದ್ಯೋಗದಡಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ನಿಗದಿ ಮಾಡಿರುವ ವೇತನವನ್ನು ಪುನರ್ ಪರಿಶೀಲಿಸಿ ಬೆಲೆ ಏರಿಕೆ ಅನುಗುಣವಾಗಿ ವೇತನ ನಿಗದಿಮಾಡಬೇಕೆಂದು ಸರಕಾರಕ್ಕೆ ಒತ್ತಾಯಿಸಿ ಮುನ್ಸಿಪಲ್ ಕಾರ್ಮಿಕರ ಸಂಘದಿಂದ ಉಪ ವಿಭಾಗಾಧಿಕಾರಿಗೆ ಮನವಿ ನೀಡಲಾಯಿತು.


ಕನಿಷ್ಟ ವೇತನ ಪರಿಷ್ಕರಣೆ ಕಾರ್ಯವನ್ನು ಪ್ರತಿ ಮೂರು ವರ್ಷಕ್ಕೊಮ್ಮೆಯಾದರೂ ಮಾಡಬೇಕು,ಕನಿಷ್ಟ ವೇತನವನ್ನು ನಿಗದಿಮಾಡುವಾಗ ಸೇವಾ ಹಿರಿತನವನ್ನು ಪರಿಗಣಿಸಬೇಕು,ಬೆಲೆ ಏರಿಕೆ ಸೂಚ್ಯಂಕದ ಅಂಶ ೭೯೭೩ ರ ನಂತರದಲ್ಲಿ ಹೆಚ್ಚಳವಾಗುವ ಪ್ರತಿ ಅಂಶ ಒಂದಕ್ಕೆ ದಿನ ಒಂದರಂತೆ ೬ ಪೈಸೆಯಂತೆ ತುಟ್ಟಿಭತ್ಯೆ ನಿಗದಿ ಪಡಿಸಬೇಕು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರಕಾರಕ್ಕೆ ನೀಡಿರುವ ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಎಸಿ ಅನುಪಸ್ಥಿತಿಯಲ್ಲಿ ಕಚೇರಿ ವ್ಯವಸ್ಥಾಪಕರು ಮನವಿ ಸ್ವೀಕರಿಸಿದರು.


ಮನವಿ ನೀಡುವ ಸಂದರ್ಭದಲ್ಲಿ ಮುನ್ಸಿಪಲ್ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗಪ್ಪ ನಾಯ್ಕ,ತಾಲೂಕಾ ಅಧ್ಯಕ್ಷ ಗಣಪತಿ ಹರಿಜನ,ಕಾರ್ಯದರ್ಶಿ ಕಿರಣ ಹರಿಜನ,ಮಹೇಶ ಹರಿಜನ ಮುಂತಾದವರು ಉಪಸ್ಥಿತರಿದ್ದರು.

ಶಿರಸಿ ತಾಲೂಕಿನ  ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/GhPLlofxjaR1GYrAz8Rpi7