ಜೊಯಿಡಾ: ತಾಲೂಕಿನ ಕೂಡಲಗಾಂವ್ ದಲ್ಲಿ ಹುಲಿ ದಾಳಿಗೆ ದನಕರುಗಳು ಬಲಿಯಾಗುತ್ತಿವೆ. ಶಿಂಗರಗಾಂವ್ ಗ್ರಾಮ ಪಂಚಾಯತಿಯ ಕೂಡಲಗಾಂವ್ , ಶಿಂಗರಗಾಂವ ಭಾಗದಲ್ಲಿ ಹುಲಿಯ ಆರ್ಭಟ ಜೋರಾಗಿದ್ದು ಈಗಾಗಲೇ ಒಂದು ಹಸು ಸತ್ತು , 2 ಎಮ್ಮೆಗಳು ಗಾಯಗೊಂಡಿವೆ. ಒಮ್ಮೆ ಹುಲಿ ದಾಳಿಗೆ ಸಿಕ್ಕ ದನಕರುಗಳು ಬದುಕಿ ಬಂದರೂ ಕೆಲವೇ ದಿನಗಳಲ್ಲಿ ವಿಷ ಏರಿ ಸಾಯುತ್ತವೆ.
ಕೂಡಲಗಾಂವ ಊರಿನ ವಿಠು ಜಂಗಲೇ ಎನ್ನುವವರ 3 ಎಮ್ಮೆಗಳು ಕಳೆದ ವಾರ ಅನುಮಾನಾಸ್ಪದವಾಗಿ ಸತ್ತು ಹೋಗಿದ್ದು, ಈ ಘಟನೆ ಮರೆಯುವ ಮೊದಲೇ ವಿಠು ಅವರ ಆಕಳೊಂದನ್ನು ಹುಲಿ ತಿಂದು ಹಾಕಿರುವುದು ವಿಠು ಕುಟುಂಬಕ್ಕೆ ಆಘಾತ ತಂದಿದೆ. ಅದೇ ದಿನ ಪ್ರದೀಪ ಜಂಗಲೆ ಎನ್ನುವವರ 2 ಎಮ್ಮೆಗಳೂ ಹುಲಿಯ ದಾಳಿಗೆ ಸಿಕ್ಕಿ ತಪ್ಪಿಸಿಕೊಂಡು ಬಂದಿವೆ.

ಕೆಲ ಜಾನುವಾರುಗಳು ವಿಷ ಆಹಾರದಿಂದ ಸಾವನ್ನಪ್ಪಿರಬಹುದು ಎಂಬುದು ವೈದ್ಯರ ಮಾತಾಗಿದೆ.

ಕೃಷಿ ಚಟುವಟಕೆಗಳಿಗೆ ನಾವು ಅರಣ್ಯ ಮೂಲಕವೇ ಸಾಗಬೇಕಾಗುತ್ತದೆ. ಅದೂ ಕೂಡ ಹುಲಿಯ ಭಯದಲ್ಲೇ ಹೋಗಬೇಕಾಗುತ್ತದೆ.
ಮಹೇಶ ಗಾವಡೆ ಸ್ಥಳೀಯರು

ಮಳೆಗಾಲದಲ್ಲಿ ಕೆಟ್ಟ ಗಿಡ ಮೂಲಿಕೆಗಳನ್ನು ತಿಂದು ಎಮ್ಮೆಗಳು ಸತ್ತಿರಬಹುದು .ಸತ್ತ ಎಮ್ಮೆ ಗಳಲ್ಲಿ ಯಾವುದೇ ರೋಗದ ಲಕ್ಷಣಗಳು ಇರಲಿಲ್ಲ ಎಂದು ತಿಳಿದು ಬಂದಿದೆ. ಯಾವುದೇ ರೋಗಗಳು ದನಗಳಿಗೆ ಬಾರದಂತೆ ಇಂಜೆಕ್ಷನ್ ಕೂಡ ಮಾಡುತ್ತಿದ್ದೇವೆ.
ಡಾ| ಪ್ರದೀಪ ಪಶುಸಂಗೋಪನಾ ಇಲಾಖೆ

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/FwQPbtH4lkpE71sGaWxRXj