ಶಿರಸಿ: ವರಮಹಾಲಕ್ಷೀಯ ಪೂಜಾ ದಿನವಾದ ಶ್ರಾವಣ ಶುಕ್ರವಾರದಂದು ಒಲಿದು ಬರುವ ಭಕ್ತರ ಪಾಲಿಗೆ ಸಾಕ್ಷಾತ್ ವರಮಹಾಲಕ್ಷ್ಮೀಯೇ ಆಗಿರುವ ಶಿರಸಿಯ ಮಾರಿಕಾಂಭಾ ದೇವಿ ದೇವಸ್ಥಾನಕ್ಕೆ ಭಕ್ತರ ದಂಡೆ ಹರಿದು ಬಂದಿತ್ತು.
ಶ್ರಾವಣ ಶುಕ್ರವಾರದ ವರಮಹಾಲಕ್ಷೀಯ ಪೂಜಾ ದಿನವಾಗಿದ್ದರಿಂದ ಭಕ್ತರು ಸಿರಿದೇವಿಯನ್ನು ನೋಡಲು ಮುಗಿ ಬಿದ್ದರು.ಅದರಲ್ಲೂ ಶ್ರೀ ಮಾರಿಕಾಂಭಾ ದೇವಿಯ ಭಕ್ತನೊರ್ವ ತನ್ನ ಮಗ ವರಮಹಾಲಕ್ಷ್ಮಿಯ ದಿನವೇ ಹುಟ್ಟಿದ್ದರಿಂದ ೩೦ ಸಾವಿರ ಲಡ್ಡು ಪ್ರಸಾದವನ್ನು ಭಕ್ತರಿಗೆ ವಿತರಣೆ ಮಾಡಿದರಲ್ಲದೇ ಮಾರಿಕಾಂಭೆಗೆ ಈ ದಿನದ ಹೂವಿನ ಅಲಂಕಾರ ಸೇವೆಯನ್ನೂ ಕೂಡಾ ತಾವೇ ಮಾಡಿಕೊಟ್ಟರು.
ಹಾಲಿ ಶಿರಸಿಯ ಅಂಭಾಗಿರಿಯ ನಿವಾಸಿಯಾಗಿ ಮೈಸೂರಿನಲ್ಲಿ ನೆಲೆಸಿರುವ ವಿಮಲೇಶ್ವರ ನಾಗಪ್ಪ ರೇವಣಕರ್ ಎಂಬುವರೇ ತನ್ನ ಮಗನಾದ ಭುವನ್ ಶುಕ್ರವಾರದ ವರಮಹಾಲಕ್ಷ್ಮೀ ಪೂಜಾ ದಿನವೇ ಹುಟ್ಟಿದ್ದರಿಂದ ಅವರು ತಮ್ಮ ಹರಕೆಯನ್ನು ದೇವಿಗೆ ಹೂವಿನ ಅಲಂಕಾರದ ರೂಪವಾಗಿ ಹಾಗೂ ಲಡ್ಡು ಪ್ರಸಾದ ವಿತರಣೆಯ ಮೂಲಕ ತೀರಿಸಿಕೊಂಡರು

ಶಿರಸಿ ತಾಲೂಕಿನ  ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/GhPLlofxjaR1GYrAz8Rpi7