ಶಿರಸಿಯಲ್ಲಿ ವಿಜೃಂಭಣೆಯಿಂದ ನಡೆದ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ

ಶಿರಸಿ: ಮಹಿಳೆಯರ ಪಾಲಿಗೆ ವರಮಹಾಲಕ್ಷ್ಮೀಯ ಪೂಜಾ ದಿನವಾದ ಶ್ರಾವಣ ಶುಕ್ರವಾರದಂದು ಎಲ್ಲರ ಮನೆ ಮನದಲ್ಲಿಯೂ ವರಮಹಾಲಕ್ಷ್ಮೀ ವಿಜ್ರಂಭಿಸಿದಳು. ಧನ ಕನಕ ಸಿರಿ ಅಷ್ಠ ಐಶ್ವರ್ಯವನ್ನು ನೀಡುವ ಮಹಾಲಕ್ಷ್ಮೀಗೆ ಸಿರಿ ತೊಡೆಸಿ ಮನೆಯಲ್ಲಿರುವ ಬಂಗಾರದ ಆಭರಣಗಳನ್ನು ಹಾಕಿ ಹೂವಿನ ಅಲಂಕಾರದಿಂದ ಶೃಂಗರಿಸಲಾಗಿತ್ತು.ಪೂಜೆಗೆ ಬಂದ ಸುಮಂಗಲಿಯರಿಗೆ ಅರಿಶಿಣ ಕುಂಕುಮವನ್ನು ಹಣೆ ಗಲ್ಲ ತಾಳಿಗೆ ಹಚ್ಚಿ, ಕೈಯಿಗೆ ಬಳೆ ತೊಡೆಸಿ ನಂತರ ಫಲಕದಲ್ಲಿ ವೀಳ್ಯದೆಲೆ,ಅಡಿಕೆ, ಬಾಳೆ ಹಣ್ಣು , ಕಡಲೆಕಾಯಿ ಹಾಕಿ ಉಡಿ ನೀಡಿ  ಅವರಿಂದ ಆಶೀರ್ವಾದ ಪಡೆದುಕೊಂಡರು.

ಶ್ರಾವಣ ಶುಕ್ರವಾರದ ನಿಮಿತ್ತ ಸೇವಂತಿಗೆ ಹಾಗು ಮಲ್ಲಿಗೆ ಹೂವಿಗೆ ಭಾರೀ ಬೇಡಿಕೆ ಬಂದಿತ್ತು. ದರ ದುಬಾರಿಯಾದರೂ ಜನರು ಹೂ ಹಣ್ಣು ಕೊಳ್ಳುವುದಕ್ಕೇನೂ ಹಿಂದೆ ಮುಂದೆ ಮಾಡಲಿಲ್ಲಾ. ಇದರಿಂದಾಗಿ ಶಿರಸಿ ಮಾರುಕಟ್ಟೆಯಲ್ಲಿ ಹೂ ಹಣ್ಣು ಅಂಗಡಿಗಳ ಮುಂದೆ ಜನ ಜಾತ್ರೆಯೇ ಕಂಡು ಬಂತು

ಶಿರಸಿ ತಾಲೂಕಿನ  ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7