ಶಿರಸಿ: ರಾಷ್ಟ್ರಾಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಹರ ಘರ ಮೆ ತಿರಂಗ ಅಭಿಯಾನ ಉ.ಕ.ಜಿಲ್ಲೆಯಲ್ಲಿ ಯಶಸ್ವಿಗೊಳಿಸಿಕೊಡಬೇಕೆಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲೆಯ ಜನತೆಗೆ ಕರೆ ನೀಡಿದ್ದಾರೆ.ಅವರು ಶನಿವಾರ ನಗರಸಭೆಯಿಂದ ಆಯೋಜಿಸಲಾಗಿದ್ದ ಹರ ಘರ ಮೆ ತಿರಂಗ ಅಭಿಯಾನದ ಜನಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ನಾವು ನಮ್ಮ ಸಾಧನೆಯಿಂದಾಗಿ ಇದೀಗ ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿ ಹೊರಹೊಮ್ಮಿದೆಯಲ್ಲದೇ ಮುಂದಿನ 25 ವರ್ಷಗಳಲ್ಲಿ ಭಾರತ ಇಡೀ ಜಗತ್ತಿಗೆ ಗುರು ಸ್ಥಾನ ಹೊಂದಲಿದೆ ಎಂದರು.ನಮ್ಮ ಸಾಧನೆ ಬಗ್ಗೆ ನಮಗೆ ಹೆಮ್ಮೆಯಿದೆ.ನಮಗೆ ನಮ್ಮ ದೇಶ ಮೊದಲು ಎನ್ನುವ ಮನೋಭಾವ ಜಾಗೃತವಾಗಬೇಕಿದೆ.ನಮ್ಮ ಮಧ್ಯ ಅನೇಕ ಶಕ್ತಿಗಳು ಬಂದು ನಮ್ಮ ಭಾವನೆಯನ್ನು ಛಿದ್ರಗೊಳಿಸುತ್ತಿದೆ.ನಾವೀಗ ನಮ್ಮ ಒಕ್ಕಟ್ಟನ್ನು ತೋರಿಸಬೇಕಾಗಿದೆ.135 ಕೋಟಿ ಜನರು ಒಗ್ಗಟ್ಟಾಗುವ ಮೂಲಕ ನಾವು ದೇಶದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುವ ಕಾಲ ಸನಿಹವಾಗಿದೆ ಎಂದರು.
ನಮ್ಮಲ್ಲಿ ಸಮಸ್ಯೆಯಿರುವುದು ನಿಜ. ಆದರೆ ಅದೇ ದೇಶದ ಅಭಿವೃದ್ದಿಗೆ ಮಾರಕವಾಗಬಾರದು.ಸಮಸ್ಯೆ ನಿವಾರಣಗೆ ನಾವೆಲ್ಲರೂ ಇಚ್ಚಾಶಕ್ತಿ ಪ್ರದರ್ಶಿಸುವುದರ ಮೂಲಕ ಸ್ವಾತಂತ್ರ್ಯ ಬಂದ 1೦೦ ನೇ ವರ್ಷಕ್ಕೆ ದೇಶವನ್ನು ಬಲಿಷ್ಠ ಹಾಗು ಸಶಕ್ತ ರಾಷ್ಟ್ರವನ್ನಾಗಿ ಮಾಡೋಣವೆಂದರು.ಹರ ಘರ ಮೆ ತಿರಂಗ ಕಾರ್ಯಕ್ರಮದಲ್ಲಿ ನಮ್ಮ ಜಿಲ್ಲೆಯ ಜನರು ಅಗಷ್ಠ 13 ರಿಂದ 15 ರವರಗೆ ಮೂರು ದಿನಗಳ ಕಾಲ ನಾವೆಲ್ಲರೂ ಏಕತಾ ಮನೋಭಾವನೆಯಿಂದ ಮನೆ,ಸರಕಾರಿ,ಖಾಸಗಿ ಕಟ್ಟಡ,ಅಂಗಡಿ ಮುಂಗಟ್ಟುಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಬೇಕೆಂದು ಹೇಳಿದರು.
ಜನ ಜಾಗೃತಿ ಜಾಥದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ,ಉಪಾಧ್ಯಕ್ಷೆ ವೀಣಾ ಶೆಟ್ಟಿ,ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ್,ಎಸಿ ದೇವರಾಜ ಆರ್,ಡಿವಾಯೆಸ್ಪಿ ರವಿ ನಾಯ್ಕ್,ಪೌರಾಯುಕ್ತ ಕೇಶವ ಚೌಗುಲೆ ಮುಂತಾದವರು ಹಾಜರಿದ್ದರು.ನಗರಸಭೆಯಿಂದ ಹೊರಟ ಜನ ಜಾಗೃತಿ ಜಾಥ ನಗರಸಭೆ ಮುಂಭಾಗದಿಂದ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹಳೆ ಬಸ್ ನಿಲ್ದಾಣದ ಬಳಿ ಸಂಪನ್ನಗೊಂಡಿತು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
