ಅಂಕೋಲಾ : ಪಟ್ಟಣದ ಶ್ರೀರಾಮ ಸ್ಟಡಿ ಸರ್ಕಲ್ ಹಾಗೂ ಕಾರವಾರದ ಉದ್ಯೋಗ ವಿನಿಮಯ ಕೇಂದ್ರದ ಆಶ್ರಯದಲ್ಲಿ ಶ್ರೀ ವೀರಾಂಜನೇಯ ಸಭಾಭವನದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ತರಬೇತಿ ಕಾರ್ಯಗಾರ ನಡೆಯಿತು.
ಕಾರ್ಯಾಗಾರವನ್ನು ವಲಯ ಅರಣ್ಯಧಿಕಾರಿ ಜಿ.ವಿ. ನಾಯಕ ಮಾತನಾಡಿ ನಿರಂತರ ಪ್ರಯತ್ನ ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಗಳೊಂದಿಗೆ ಮುಂದುವರೆದರೆ ಯಶಸ್ಸು ನಿಶ್ಚಿತ ಎಂದರು.
ಉದ್ಯೋಗ ವಿನಿಮಯ ಕೇಂದ್ರದ ವಿನೋದ ನಾಯ್ಕ ಮಾತನಾಡಿ ಜಿಲ್ಲೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಲಾಭ ಪಡೆದು ರಾಜ್ಯ ಮತ್ತು ಕೇಂದ್ರ ಸರಕಾರಗಳ ಸರಕಾರಿ ಹುದ್ದೆಗಳನ್ನು ಅಲಂಕರಿಸುವಂತಾಗಲಿ ಎಂದರು.
ಉದ್ಯೋಗ ವಿನಿಮಯ ಕೇಂದ್ರ ಶಿವರಾಜ ಗೌಡ ಮಾತನಾಡಿದರು. ಶ್ರೀರಾಮ ಸ್ಟಡಿ ಸರ್ಕಲ್ನ ನಿರ್ದೇಶಕ ಸೂರಜ ನಾಯಕ ಸ್ವಾಗತಿಸಿದರು. ವಿದ್ಯಾ ನಾಯ್ಕ ಭಟ್ಕಳ ಕಾರ್ಯಕ್ರಮ ನಿರೂಪಿಸಿದರು. ಲಕ್ಮೀ ಹೊನ್ನಾವರ ಪ್ರಾರ್ಥಿಸಿದರು. ಶ್ರದ್ಧಾ ತಾಂಡೇಲ ಕಾರವಾರ ವಂದಿಸಿದರು.
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE
