ಅಂಕೋಲಾ : ಸದ್ಭಾವನೆ, ಕರ್ತವ್ಯ ಪಾಲನೆ ಹಾಗೂ ಶಿಸ್ತಿನಿಂದ ವರ್ತಿಸಿ ಶಾಲಾ ಪಂಚಾಯತ ಕಾರ್ಯಕ್ರಮ ಯಶಸ್ವಿಗೊಳಿಸಿ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಶೆಟಗೇರಿ ಗ್ರಾಪಂ ಅಧ್ಯಕ್ಷೆ ಸವಿತಾ ವೆಂಕಟರಾಯ ನಾಯಕ ಹೇಳಿದರು.

ಅವರು ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ಹಮ್ಮಿಕೊಂಡ ಶಾಲಾ ಪಂಚಾಯತ ಮತ್ತು ವಿವಿಧ ಸಂಘಗಳ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.  

ಅಧ್ಯಕ್ಷತೆವಹಿಸಿದ ಸತ್ಯಾಗ್ರಹ ಸ್ಮಾರಕ ಶಿಕ್ಷಣ ಸಮಿತಿಯ ಅಧ್ಯಕ್ಷ ರಮಾನಂದ ಬಿ. ನಾಯಕ ಮಾತನಾಡಿ, ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗಳು ಘನತೆ ಮತ್ತು ಗೌರವ ಹೆಚ್ಚಿಸಿಕೊಳ್ಳುವಂತೆ ನಡೆದುಕೊಳ್ಳಬೇಕು. ಅದರ ಜೊತೆಗೆ ಅಭ್ಯಾಸದ ಕಡೆಗೆ ಗಮನ ಕೊಟ್ಟು ಸೌಜನ್ಯತೆಯನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ, ಹಿರಿಯ ಸಾಹಿತಿ ಶಾಂತಾರಾಮ ಎನ್. ನಾಯಕ ಮಾತನಾಡಿದರು.

ಶಿಕ್ಷಣ ಇಲಾಖೆಯ ಅಧಿಕಾರಿ ಬಿ.ಎಲ್.ನಾಯ್ಕ, ಪಂಚಾಯತ ಪ್ರಧಾನ ಕಾರ್ಯದರ್ಶಿ ಗೋಕುಲ ವೆಂಕಟರಾಯ ನಾಯಕ, ಸುಕನ್ಯಾ ಶಿವಾನಂದ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಕ್ಷ್ಮೀ  ಗೌಡ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕ ಎನ್.ವಿ. ರಾಠೋಡ ಸ್ವಾಗತಿಸಿದರು. ದೈಹಿಕ ಶಿಕ್ಷಕ ಭಾರ್ಗವ ನಾಯಕ ಪ್ರಮಾಣ ವಚನವನ್ನು ಬೋಧಿಸಿದರು. ಶಿಕ್ಷಕಿಯರಾದ ಶಾಂತಲಾ ನಾಯಕ ಹಾಗೂ ಅನುಪಮಾ ನಾಯಕ ವರದಿ ವಾಚಿಸಿದರು. ಶಿಕ್ಷಕ ರಾಜು ಜಿ. ಶೆಡಗೇರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಎಂ.ಎಸ್. ದೇವಾಡಿಗ ವಂದಿಸಿದರು

ಕಾರವಾರ ಟೈಮ್ಸ್ ನ್ಯೂಸ್  updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/HyQE3CIKWEICSXQCoirwQE