ಅಂಕೋಲಾ : ಉಕ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಅವರ ನೇತೃತ್ವದಲ್ಲಿ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿ ಕೇಂದ್ರ ಪುರಸ್ಕೃತ ಉಳಿತಾಯ ಮತ್ತು ಪರಿಹಾರ ಯೋಜನೆಯ ವಂತಿಕೆ ಮತ್ತು ಅನುದಾನ ಹಾಗೂ ಕೋವಿಡ್ ಪರಿಹಾರ ಕುರಿತು ಶೀಘ್ರ ಬಿಡುಗಡೆಗೊಳಿಸುವಂತೆ ನಿಯೋಗ ಭೇಟಿಯಾಗಿ ಒತ್ತಾಯಿಸಿತು.

2014-15 ರಿಂದ 2017-18 ರ ವರೆಗಿನ ಅಲ್ಪ ಪ್ರಮಾಣದ ಅನುದಾನ ಮತ್ತು ವಂತಿಕೆ ಹಾಗೂ 2018-19 ರಿಂದ 2021-22ರ ವರೆಗಿನ ಪೂರ್ಣ ಪ್ರಮಾಣದ ಅನುದಾನ, ವಂತಿಕೆ ಹಾಗೂ ಸದರಿ ಯೋಜನೆಯ ಹಣ ಬಿಡುಗಡೆಯಾಗದೆ ಇರುವುದರಿಂದ ಹಲವಾರು ಬಾರಿ ಮೀನುಗಾರರ ಒಕ್ಕೂಟದಿಂದ ಮನವಿ ನೀಡಿ ಚರ್ಚಿಸಲಾಗಿದೆ.

ಆದರೂ ಸಹ ಇದುವರೆಗೆ ಬಿಡುಗಡೆಯಾಗದೆ ಇರುವ ಕುರಿತು ಫಲಾನುಭವಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಅನುದಾನ ಮೀನುಗಾರರಿಗೆ ಆಸರೆಯಾಗುತ್ತಿತ್ತು. ಈ ಹಿನ್ನಲೆಯಲ್ಲಿ ಕೂಡಲೆ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಲಾಯಿತು. 

ಮನವಿ ಆಲಿಸಿದ ಜಂಟಿ ನಿರ್ದೇಶಕಿ ಕವಿತಾ ಮಾತನಾಡಿ ಸಿಬ್ಬಂದಿಗಳಿಗೆ ಈ ಯೋಜನೆ ಹಣ ಫಲಾನುಭವಿಗಳಿಗೆ ಒದಗಿಸಲು ಎಲ್ಲಾ ನಿರ್ದೇಶನ ನೀಡಲಾಗಿದೆ. ಅಲ್ಲದೆ ತಾನು ಖುದ್ದಾಗಿ ಈ ಕಾರ್ಯದಲ್ಲಿ ತೊಡಗಿ ಆಗಷ್ಟ್ 15 ರೊಳಗೆ ಸಾಧ್ಯವಾದಷ್ಟು ಫಲಾನುಭವಿಗಳಿಗೆ ತಲುಪಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಮೀನುಗಾರಿಕಾ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಹರಿಹರ ಹರಿಕಾಂತ, ಕಾರ್ಯದರ್ಶಿ ರಾಜು ಹರಿಕಂತ್ರ ಕಣಗಿಲ, ಫೆಡರೇಶನ್ ಸದಸ್ಯ ಶ್ರೀಧರ ಹರಿಕಂತ್ರ, ಹರಿಕಂತ್ರ ಉಪಸ್ಥಿತರಿದ್ದರು.

ಕಾರವಾರ ಟೈಮ್ಸ್ ನ್ಯೂಸ್  updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/HyQE3CIKWEICSXQCoirwQE