ಜೋಯಿಡಾ –   ತಾಲೂಕಿನ ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಗಣೇಶಗುಡಿ ಕ್ಯಾಂಪ್ 1 ಭಾಗದ ವೆಂಕಟೇಶ ಬಿ ಎನ್ನುವವರ ಮನೆಯ ಮೇಲೆ ಮರವೊಂದು ಬಿದ್ದು ಮನೆ ಸಂಪೂರ್ಣ ನಾಶವಾದ ಘಟನೆ ಬುಧವಾರ ನಡೆದಿದೆ.

   ಈ ಹಿಂದೆಯೇ ಈ ಭಾಗದ ಜನರು ಮನೆಯ ಮೇಲೆ ಅಪ್ಪಳಿಸುವ ಮರಗಳನ್ನು ತೆರವುಗೊಳಿಸಿ ಎಂದು ಅರಣ್ಯ ಇಲಾಖೆಗೆ ಮನವಿ ಮಾಡಿದ್ದು ಕೆಲ ಮರಗಳ ಕೊಂಬೆಗಳನ್ನು ಮಾತ್ರ ತೆಗೆಯಲಾಗಿದ್ದು ಅಪಾಯಕಾರಿ ಮರಗಳನ್ನು ಬಿಡಲಾಗಿದೆ ಎಂಬುದು ಇಲ್ಲಿನ ಜನರ ದೂರಾಗಿದೆ.

  ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯತ ಜನಪ್ರತಿನಿಧಿಗಳು ಮತ್ತು ಅರಣ್ಯ ಇಲಾಖೆ ನೇತೃತ್ವದಲ್ಲಿ ಬಿದ್ದ ಮರದ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/FwQPbtH4lkpE71sGaWxRXj