ಶಿರಸಿ: ಭಾರತ ಸ್ವಾತಂತ್ರ್ಯ ದಿನದ ಅಮೃತಮಹೋತ್ಸವದ ಸಂದರ್ಭದಲ್ಲಿ ಬಿಜೆಪಿ ಸರಕಾರ ಹಣಕ್ಕೆ ರಾಷ್ಟ್ರಧ್ವಜ ಮಾರಾಟ ಮಾಡುತ್ತಿರುವದನ್ನು ನೋಡಿದರೆ ಇದರಲ್ಲೂ ದುಡ್ಡು ಹೊಡೆಯುತ್ತಿರುವ ಬಗ್ಗೆ ಜನರಲ್ಲಿ ಅನುಮಾನ ವ್ಯಕ್ತವಾಗುತ್ತಿದೆ ಎಂದು ಡಿಸಿಸಿ ಅಧ್ಯಕ್ಷ ಭೀಮಣ್ಣ ಟಿ ನಾಯ್ಕ ಆರೋಪಿಸಿದರು.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಗುಡ್ನಾಪುರದ ಶ್ರೀ ಬಂಗಾರೇಶ್ವರ ದೇವಸ್ಥಾನದಿಂದ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ಹೇಳಿ ಕೇಳಿ ಇದು ಪರ್ಸೆಂಟೇಜ್ ಸರಕಾರ.ಈಗ ಧ್ವಜಮಾರಿಯೂ ಕೂಡಾ ಹಣ ಮಾಡುತ್ತಿದೆ ಎಂದು ಲೇವಡಿ ಮಾಡಿದರು.
ಪ್ರಧಾನಿ ಮೋದಿಯವರಿಗೆ ಭಾರತದ ಜನಸಂಖ್ಯೆ ಗೊತ್ತಿಲ್ಲ.ಅವರು 130 ಕೋಟಿ ದೇಶದ ಜನರಿಗೆ ಕೇವಲ 20 ಕೋಟಿ ಧ್ವಜ ವಿತರಣೆ ಮಾಡುತ್ತಿದ್ದಾರೆಂದರು.ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಪಕ್ಷವೆಂದರೆ ಅದು ಕೇವಲ ಕಾಂಗ್ರೆಸ್ ಪಕ್ಷ. ಬಿಜೆಪಿಯಲ್ಲಿ ಸ್ವಾತಂತ್ರ ಸಂಗ್ರಾಮಕ್ಕಾಗಿ ಹೋರಾಟ ಮಾಡಿದವರು ಯಾರೂ ಇಲ್ಲ. ಬಿಜೆಪಿಯಿಂದ ದೇಶದಲ್ಲಿ ಸಮಾನತೆ ಏಕತೆ ಸಾಧಿಸಲು ಸಾಧ್ಯವೇ ಇಲ್ಲವೆಂದ ಅವರು ಕಾಂಗ್ರೆಸ್ ಈ ನಿಟ್ಟಿನಲ್ಲಿ ಜನರಲ್ಲಿ ಸ್ವಾತಂತ್ರ್ಯ ಸಂಗ್ರಾಮವನ್ನು ನೆನಪಿಸಿ ಅವರಲ್ಲಿ ಏಕತೆಯ ಭಾವೈಕ್ಯತೆಯ ಮಂತ್ರ ಸಾರಲು ಪಾದಯಾತ್ರೆ ಕೈಗೊಂಡಿರುವುದಾಗಿ ತಿಳಿಸಿದರು.
ದೇಶದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತರಲಾಗಿದ್ದ ಕಾರ್ಯಕ್ರಮವನ್ನು ಖಾಸಗಿಕರಣಗೊಳಿಸಿ ಬಡ ಜನರನ್ನು, ನಿರುದ್ಯೋಗಿಗಳನ್ನು ಬೀದಿಗೆ ತರುವ ಕೆಲಸಮಾಡುತ್ತಿದೆ. ದೇಶದಲ್ಲಿ ಕಿಚ್ಚು ಹಚ್ಚಿ ಅಧಿಕಾರಕ್ಕೆ ಬರುತ್ತೇವೆಂದರೇ ಅದು ಬಿಜೆಪಿಯ ಹಗಲು ಕನಸೆಂದು ಹೇಳಿದರು.
ಕಾಂಗ್ರೆಸ್ ಯುವ ನಾಯಕ ಪ್ರಶಾಂತ ದೇಶಪಾಂಡೆ ಮಾತನಾಡಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಲ್ಲಿರುವ ನಾವು ಜಗ್ಗತ್ತಿಗೆ ನಮ್ಮ ಒಗ್ಗಟ್ಟನ್ನು ತೋರಿಸಬೇಕಾಗಿದೆ.ಮಹಾತ್ಮ ಗಾಂಧಿಯವರು ಕಂಡ ಕನಸನ್ನು ಸಕಾರಗೊಳಿಸಲು ನಮಗೊಂದು ಅವಕಾಶ ಸಿಕ್ಕಿದ್ದು ನಾವೆಲ್ಲರೂ ಪಕ್ಷಾತೀತವಾಗಿ ಇದನ್ನು ಸಾಧಿಸಿ ತೋರಿಸಬೇಕಾಗಿದೆ ಎಂದರು.
ಗಾಂಧಿಯವರು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಧುಮುಕಿ “ಮಾಡು ಇಲ್ಲವೇ ಮಡಿ” ಘೋಷಣೆ ಮಾಡಿದಾಗ ಇಡೀ ದೇಶದ ಜನರು ಎದ್ದು ಬಂದು ಗಾಂಧಿಯವರಿಗೆ ಒಕ್ಕೂರಿಲಿನಿಂದ ಸಾತ್ ನೀಡಿದರು. ಈ ಸಂಧರ್ಭದಲ್ಲಿ ಅನೇಕರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದರು. ಅದರ ಪರಿಣಾಮವೇ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಸ್ವಾತಂತ್ರ್ಯ ಬಂದ ಮೇಲೆ ದೇಶ ಸಾಕಷ್ಟು ಅಭಿವೃದ್ಧಿ ಸಾಧಿಸಿತು. ಆದರೂ ಸಾಧಿಸಬೇಕಾಗಿದ್ದು ಸಾಕಷ್ಟುಯಿದೆ.ಅದನ್ನು ನಾವೆಲ್ಲರೂ ಜಾತಿ, ಮತ,ಕೋಮು,ಹಿಂಸೆ ದೊಳ್ಳೂರಿಯನ್ನು ಬಿಟ್ಟು ಸಾಧಿಸಿ ತೋರಿಸುವ ಮೂಲಕ ಜಗತ್ತಿಗೆ ನಮ್ಮ ದೇಶದ ಶಕ್ತಿ ತೋರಿಸೋಣವೆಂದರು.
ಪಾದಯಾತ್ರೆಯಲ್ಲಿ ಬನವಾಸಿ ಕಾಂಗ್ರೆಸ್ ಬ್ಲಾಕ್ ಅದ್ಯಕ್ಷ ಸಿ ಎಫ್ ನಾಯ್ಕ,ಪ್ರಮುಖರಾದ ಬಸವರಾಜ ದೊಡ್ಮನೆ,ದೀಪಕ್ ದೊಡ್ಡೂರ್,ಶ್ರೀಲತಾ ಕಾಳೆರಮನೆ,ಶಿವಾಜಿ ಬನವಾಸಿ,ಸಿ ಡಿ ಗೌಡ್ತು,ಭದ್ರ ಗೌಡ್ರು,ದೀಪಕ ಬಂಗ್ಲೆ,ಪುಟ್ಟಪ್ಪ ನಾಯ್ಕ ಮಧುರವಳ್ಲಿ,ಅಲ್ತಾಫ್ ಚೌದ್ರಿ,ಕಿರಣ ನಾಯ್ಕ,ವಿ ಎಸ್ ನಾಯ್ಕ ಮದುರವಳ್ಳಿ,ರಾಘು ನಾಯ್ಕ,ಪ್ರಸನ್ ಕುಮಾರ್,ಆನಂದ ನಾಯ್ಕ ಮುಂತಾದವರು ಇದ್ದರು.
ಇದಕ್ಕೂ ಪೂರ್ವದಲ್ಲಿ ಭೀಮಣ್ಣ ನಾಯ್ಕ ಹಾಗು ಪ್ರಶಾಂತ ದೇಶಪಾಂಡೆಯವರು ತುಂಬಿ ತುಳುಕುತ್ತಿರುವ ಗುಡ್ನಾಪುರ ಕೆರೆಗೆ ಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದರು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
